ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ

3101Klb02
Published on

ಕಲಬುರಗಿ: ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡ ಎರಡು ದಿನ ನಾವಿನ್ಯತೆ ಮೇಳದ ಆವಿಷ್ಕಾರೋತ್ಸವ ವಿಜ್ಞಾನ ಪ್ರದರ್ಶನದಲ್ಲಿ ಅತ್ಯುತ್ತಮ, ನೂತನ ಆವಿಷ್ಕಾರ ಪ್ರದರ್ಶಿಸಿ ವಿಜೇತರಾದ ವಿವಿಧ ಶಾಲೆಗಳ ಮಾದರಿಗಳಿಗೆ ಬುಧವಾರ ಬಹುಮಾನ ವಿತರಿಸಲಾಯಿತು. ಗುಲ್ಬರ್ಗಾ ವಿವಿ ಬಯೋಟೆಕ್ನಾಲಜಿ ವಿಭಾಗದ ಹಿರಿಯ ಪ್ರಾಧ್ಯಾಪಕ ಚಂದ್ರಕಾAತ ಕೆಳಮನಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಹೈಸ್ಕೂಲ್ ವಿಭಾಗದ: ಶ್ರೀ ದಾಮೋಧರ ರಾಘೋಜಿ ಮೇಮೋರಿಯಲ್ ಸ್ಕೂಲ್‌ನ ವಿದ್ಯಾರ್ಥಿಗಳಾದ ರೀತು, ಮಂಜುನಾಥ ಶಿಂಧೆ ಮತ್ತು ವಿಭಾ ಎನ್. ಕುರಕೋಟಿ ತಯಾರಿಸಿದ ಸ್ಮಾರ್ಟ್ ಫರ್ಟಿಲೈಸರ್ ಇನ್ ಸ್ಮಾರ್ಟ್ ಅಗ್ರಿಕಲ್ಚರ್' ಮಾದರಿ ಪ್ರಥಮ ಸ್ಥಾನ ಪಡೆಯಿತು. ಮಿಲೇನಿಯಂ ಇಂಗ್ಲಿಷ್ ಮೀಡಿಯಂ ಶಾಲೆಯ ಅನುರಾಧಾ ಡಿ., ಅನುಷಾ ಆರ್. ಸಿದ್ಧಪಡಿಸಿದ್ದಆಲ್ಕೋಹಾಲ್ ಇಂಜಿನ್ ಲಾಕಿಂಗ್ ಸಿಸ್ಟಮ್' (ದ್ವಿತೀಯ). ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಾದ ಸುದರ್ಶನ ಸಿ. ರಾಠೋಡ ಸಿದ್ಧಪಡಿಸಿದ್ದ ಆ್ಯಕ್ಸಿಡೆಂಟ್ ಡಿಟೆಕ್ಟೆಡ್ ಎನ್ವಿರಾನ್ಮೆಂಟಲ್ ಫ್ರೆಂಡ್ಲಿ' ತೃತೀಯ ಸ್ಥಾನ ಪಡೆಯಿತು. ಐಟಿಐ ವಿಭಾಗ: ಕಲಬುರಗಿ (ಪುರುಷ) ಸರ್ಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳಾದ ರೋಹಿತ್ ಮತ್ತು ಸೋಹೇಬ್ ಅಖ್ತರ್ ಅವರು ತಯಾರಿಸಿದ ಭೂಕಂಪನ ಅಲಾರಂ ಮಾದರಿಗೆ ಪ್ರಥಮ, ಸರ್ಕಾರಿ ಐಟಿಐ (ಮಹಿಳಾ) ಕಾಲೇಜಿನ ವಿದ್ಯಾರ್ಥಿಗಳಾದ ಶಿವಲಿಂಗ್ ಮತ್ತು ಹೀನಾ ತಯಾರಿಸಿದ೨ ಬಿಎಚ್‌ಕೆ ಹೌಸ್‌ವೈರಿಂಗ್' ಮಾದರಿಗೆ ದ್ವಿತೀಯ, ಸರ್ಕಾರಿ ಐಟಿಐ (ಪುರುಷ) ಕಾಲೇಜಿನ ವಿದ್ಯಾರ್ಥಿಗಳಾದ ಶೈಲೇಶ ಮತ್ತು ಶಿವಲಿಂಗ್ ತಯಾರಿಸಿದ ಚೈನ್ ಮೇಕರ್, ಸ್ಪಾನರ್ ಮಾದರಿಗೆ ತೃತೀಯ ಬಹುಮಾನ ನೀಡಲಾಯಿತು.

ಪದವಿ, ಇಂಜನಿಯರಿಂಗ್ ಕಾಲೇಜು ವಿಭಾಗ: ನೂತನ ವಿದ್ಯಾಲಯದ ಬಿ.ಇಡಿ ಕಾಲೇಜಿನ ವಿದ್ಯಾರ್ಥಿಯಾದ ಅಜಯಕುಮಾರ ತಯಾರಿಸಿದ ಸ್ಮಾರ್ಟ್ ರೈತ ಪ್ರಥಮ ಬಹುಮಾನ. ಸರ್ಕಾರಿ ಬಿ.ಇಡಿ ಕಾಲೇಜಿನ ಲಕ್ಷ್ಮೀ ಆರ್.ವಿ. ಮತ್ತು ಕಾರ್ತಿಕ ಕೆ.ಡಿ. ತಯಾರಿಸಿದ ೩ಡಿ ಮಾದರಿಗೆ ದ್ವಿತೀಯ, ಎಸ್.ಬಿ. ವಿಜ್ಞಾನ ಪದವಿ ಕಾಲೇಜಿನ ನಿಖೀಲ ಎಂ.ಸಿ. ಮತ್ತು ಪಲ್ಲವಿ ಎಸ್.ಡಿ. ಅವರ ಗ್ರೀನ್ ಬಸ್ ಸ್ಟಾಪ್ ತೃತೀಯ ಬಹುಮಾನ ಪಡೆಯಿತು.

ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ೨೦೦೦ ರೂ., ದ್ವಿತೀಯ ೧೫೦೦ ರೂ. ಹಾಗೂ ತೃತೀಯ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ೧೦೦೦ ರೂ. ಬಹುಮಾನ ವಿತರಿಸಲಾಯಿತು. ಜಿಲ್ಲಾ ವಿಜ್ಙಾನ ಅಧಿಕಾರಿ ಕೆ.ಎಂ.ಸುನೀಲ್ ಸ್ವಾಗತಿಸಿದರು. ಜಿಲ್ಲಾ ವಿಜ್ಞಾನ ಕೇಂದ್ರದ ತಾಂತ್ರಿಕ ಅಧಿಕಾರಿ ಪಿ.ಕೃಷ್ಣಮೂರ್ತಿ ವಂದಿಸಿದರು. ಸಂಯೋಜಕ ಎನ್.ಪೊನ್ನರಸನ್ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net