

ಹುಬ್ಬಳ್ಳಿ: ಬೆಂಗೇರಿ ಜೈ ಹನುಮಾನ ಟ್ರೇಡರ್ಸ್ ಮಾಲೀಕ, ರಾಷ್ಟ್ರೀಯ ಸದ್ಭಾವನ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ರಮೇಶ ಮಹದೇವಪ್ಪನವರ ಜನ್ಮದಿನದ ನಿಮಿತ್ತ ಸೋಮವಾರ ಬೆಂಗೇರಿ ಖಾದಿ ಗ್ರಾಮದ್ಯೋಗದಲ್ಲಿ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಹೊಲಿಗೆ ತರಬೇತಿ ಸಂಪೂರ್ಣಗೊಳಿಸಿದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. 120 ಜನರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು. ಹುಬ್ಬಳ್ಳಿ ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಹಾಜಿ ಅಬ್ದುಲ್ ಖಾದರ್ ಸಾಬ್ ಹಾಗೂ ಫಾದರ್ ಅಲ್ವಿನ್ ಸುಧೀರ್ ಸಾನ್ನಿಧ್ಯ ವಹಿಸಿದ್ದರು.
ಸಮಾಜ ಸೇವಕ ರಮೇಶ ಮಹದೇವಪ್ಪನವರ, ಪಾಲಿಕೆ ಸದಸ್ಯರಾದ ಎಂ. ವೈ. ನರಗುಂದ, ಬೀರಪ್ಪ ಖಂಡೇಕಾರ, ಪ್ರಕಾಶ ಕುರಹಟ್ಟಿ, ಮಾಜಿ ಸದಸ್ಯರಾದ ಪಿ. ಕೆ. ರಾಯನಗೌಡ್ರು, ಹೂವಪ್ಪ ದಾಯಗೋಡಿ, ಗುರುಸಿದ್ದಪ್ಪ ಕುಂದಗೋಳ, ರಜಾಕ್ ನದಾಫ್, ಹಟೇಲಸಾಬ್ ಮುಲ್ಲಾ, ಹನುಮಂತಪ್ಪ ಮಳಗಿ, ದಶರಥ ಕಾಳೆ, ಅಮೀರಖಾನ್ ಚಂದನಮಟ್ಟಿ, ಇತರರು ಇದ್ದರು.