

ಅರಕಲಗೂಡು: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಗುರಿ ಸಾಧನೆ ಮಾಡುವ ಮುಖೇನ ಸಮಾಜಕ್ಕೆ ಅಭಿವೃದ್ಧಿಗೆ ನೆರವಾಗಬೇಕು ಎಂದು ಶಾಸಕ ಎ.ಟಿ. ರಾಮಸ್ವಾಮಿ ಸಲಹೆ ನೀಡಿದರು.
ತಾಲೂಕಿನ ರಾಮನಾಥಪುರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ವಿಶ್ವ ಆಂಗವಿಕಲರ ದಿನಾಚರಣೆ ಮತ್ತು ಜಿಲ್ಲಾ, ರಾಜ್ಯ ಮಟ್ಟದಲ್ಲಿ ಕ್ರೀಡೆ ಮತ್ತು ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗನ್ನು ಸನ್ಮಾನಿಸಿ ಮಾತನಾಡಿದ ಅವರು, ಆತ್ಮ ಭಯ, ಸಮಾಜದ ಭಯ ಮತ್ತು ಕಾನೂನಿನ ಭಯ ಎಲ್ಲರಿಗೂ ಇದ್ದಲ್ಲಿ ಸಮಸಮಾಜ ನಿರ್ಮಾಣವಾಗುತ್ತದೆ. ವಿದ್ಯಾರ್ಥಿಗಳ ಭವಿ?್ಯವು ಉತ್ತಮವಾಗಬೇಕು ಎನ್ನುವ ದೃಷ್ಟಿಯಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಾದ ಅರ್ಪಿತಾ, ವಿ.ಎಂ. ವರ್ಷಿತಾ, ಬಿ. ಅಕ್ಷಿತಾ, ಜ್ಯೋತಿ ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಸರ್ವಮಂಗಳ, ಅಂಗವಿಕಲ ನೋಡಲ್ ಅಧಿಕಾರಿ ಜಹೀರ್, ಸಿಡಿಸಿ ಸದಸ್ಯ ಪುಟ್ಟರಾಜು, ಹೇಮಂತ್, ಗ್ರಾಪಂ ಪಿಡಿಒ ಕುಮಾರಸ್ವಾಮಿ, ಕಾರ್ಯದರ್ಶಿ ನಿಂಗಣ್ಣ, ಉಪನ್ಯಾಸಕರು ಇದ್ದರು.