ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್ ವಿತರಣೆ

LAPTOP
Published on

ಹುಬ್ಬಳ್ಳಿ: ಬಿಇ ವ್ಯಾಸಂಗ ಮಾಡುತ್ತಿರುವ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಹು-ಧಾ ಮಹಾನಗರ ಪಾಲಿಕೆಯ ಎಂಜಿಎನ್​ವಿ (ಮಹಾತ್ಮ ಗಾಂಧಿ ನಗರ ವಿಕಾಸ) ಯೋಜನೆಯಡಿ ಮಂಜೂರಾದ ಲ್ಯಾಪ್​ಟ್ಯಾಪ್​ಗಳನ್ನು ಸೋಮವಾರ ವಿತರಿಸಲಾಯಿತು.

ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ತಮ್ಮ ಗೃಹ ಕಚೇರಿಯಲ್ಲಿ ನವೀನ ಹುಬ್ಬಳ್ಳಿ, ಕೀರ್ತನ ಕುಂದಗೋಳ, ಚಿತ್ರ ಸೇನಾ ಘೊಡ್ಕೆ ಹಾಗೂ ಪೌರ ಕಾರ್ವಿುಕರ ಮಕ್ಕಳಾದ ತರುಣ ಅರವೇಡ, ರಾಹುಲ್ ಬೇವೂರ ಅವರಿಗೆ ಲ್ಯಾಪ್​ಟಾಪ್ ವಿತರಿಸಿದರು.

ಪಾಲಿಕೆಯ ವಲಯ ಕಚೇರಿ ಸಹಾಯಕ ಆಯುಕ್ತ ಗಿರೀಶ ತಳವಾರ, ಮೋಹನ ಅಸುಂಡಿ, ಪಾಲಕರು, ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net