

ಚಿತ್ರದುರ್ಗ:ಭಾನುವಾರ ನಡೆದ ಚಿತ್ರದುರ್ಗ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಶೇ.99ಅಂಕ ಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕೆ.ಆರ್.ಅಭಿನವ್,ಶೇ.98 ಅಂಕ ಪಡೆದ ಎಂ.ಮಹಿತಾ ಸೇರಿದಂತೆ ಅತಿ ಹೆಚ್ಚು ಅಂಕಗಳೊಂದಿ ಗೆ ಎಸ್ಸೆಸ್ಸೆಲ್ಸಿ ಹಾಗೂ ಸೆಕೆಂಡ್ ಪಿಯುಸಿಯಲ್ಲಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾನಗರ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸಂಘದ ಗೌರವಾಧ್ಯಕ್ಷ ಜೆ ಪರಶುರಾಮ್,ಅಧ್ಯಕ್ಷ ಪ್ರತಾಪ್‌ರೆಡ್ಡಿ,ಉಪಾಧ್ಯಕ್ಷ ಶಂಕರ್,ಸಂಘದ ಕಾರ್ಯದರ್ಶಿ ಗಾಯತ್ರಿ ಶಿವರಾಮ್, ಸಹ ಕಾರ್ಯದರ್ಶಿಮಂಜುನಾಥ್,ಖಜಾಂಚಿ ಮುಕುಂದ್‌ರೆಡ್ಡಿ,ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ನಿರ್ದೇಶಕರಾದ ಡಾ.ಗೌರಮ್ಮ, ಡಾ.ಹರಿಣಿ, ವೀಣಾಜಯ ಾಮ್,ಮಂಜುನಾಥ್,ಗ್ರಾಪಂ ಸದಸ್ಯರಾದ ರಮೇಶ್‌ಮೋತ್ಕೂರ್,ನಿರಂಜನ್‌ಮೂರ್ತಿ,ಸದಸ್ಯರು,ಪಾಲಕರು ಇದ್ದರು.