ಪ್ರತಿಭಾ ಪುರಸ್ಕಾರಕ್ಕೆ ಕೆಎಂಎ ಸದಸ್ಯರ ಮಕ್ಕಳಿಂದ ಅರ್ಜಿ ಆಹ್ವಾನ

15 gkl 01
ಕೆಎಂಎ
Published on

ಗೋಣಿಕೊಪ್ಪ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಕೆಎಂಎ ಸದಸ್ಯರ ಮಕ್ಕಳಿಂದ ಕೆಎಂಎ ಪ್ರತಿಭಾ ಪುರಸ್ಕಾರ-2023’ಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಎರಡೂ ವಿಭಾಗದಲ್ಲೂ ಶೇ.75%ಕ್ಕಿಂತ ಮೇಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಪಾಲಕರ ಪೈಕಿ ಒಬ್ಬರು (ತಂದೆ ಅಥವಾ ತಾಯಿ) ಕೆಎಂಎ ಸದಸ್ಯತ್ವ ಪಡೆದು ಕನಿಷ್ಟ ಆರು ತಿಂಗಳು ಪೂರ್ಣಗೊಂಡಿ ರಬೇಕು ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂಎ) ಅಧ್ಯಕ್ಷ ದುದ್ದಿಯಂಡ ಎಚ್.ಸೂಫಿ ಹಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಎಂಎ ಮತ್ತು ಕೊಡವ ಮುಸ್ಲಿಂ ಶಿಕ್ಷಣ ನಿಧಿಯಿಂದ ನೀಡಲಾಗುವ ಪುರಸ್ಕಾರಕ್ಕೆ ಎರಡೂ ವಿಭಾಗಗಳಿಂದ ತಲಾ13 ಅರ್ಜಿಗಳನ್ನು ಪರಿಗಣಿಸಲಾಗುವುದು. ಇದರಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ಆಕರ್ಷಕ ಟ್ರೋಫಿಯೊಂದಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಉಳಿದಂತೆ 10 ವಿದ್ಯಾರ್ಥಿಗಳಿಗೆ ನಗದು ಬಹುಮಾನ , ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

ಮದರಸಾ ವಿಭಾಗದಲ್ಲಿ ಹೆಚ್ಚಿನ ಅಂಕಗಳಿಸಿರುವ 5, 7ನೇ ಮತ್ತು 10ನೇ ತರಗತಿ ಮಕ್ಕಳೂ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಈ ವಿಭಾಗದಲ್ಲೂ ಅರ್ಜಿ ಸಲ್ಲಿಸಲು ಕನಿಷ್ಟ ಶೇ.75% ಕ್ಕಿಂತ ಅಂಕ ಪಡೆದಿರಬೇಕು.

ಶಾಲಾ ಮುಖ್ಯ ಶಿಕ್ಷಕ, ಕಾಲೇಜು ಪ್ರಾಂಶುಪಾಲರು, ಮದರಸಾ ಅಧ್ಯಾಪಕರಿಂದ ದೃಢೀಕೃತಗೊಂಡ ಅಂಕಪಟ್ಟಿ ವಿದ್ಯಾಭ್ಯಾಸ ಮುಂದುವರಿಸುತ್ತಿರುವ ಕುರಿತು ವ್ಯಾಸಂಗ ದೃಢೀಕರಣ ಪತ್ರ, ಮನೆತನ ಮತ್ತು ಪಾಲಕರ ಪೂರ್ಣ ವಿವರ, ದೂರವಾಣಿ ಸಂಖ್ಯೆ, ಇತ್ತೀಚಿನ 3 ಭಾವಚಿತ್ರವನ್ನು ಅಧ್ಯಕ್ಷರು, ಕೊಡವ ಮುಸ್ಲಿಂ ಅಸೋಸಿಯೇಷನ್, ಪ್ರಧಾನ ಕಚೇರಿ, ಡಿಎಚ್‌ಎಸ್ ಕಟ್ಟಡ, ಮುಖ್ಯ ರಸ್ತೆ, ವಿರಾಜಪೇಟೆ, ಕೊಡಗು ಜಿಲ್ಲೆ, ಪಿನ್ ಕೋಡ್-571218 ಇಲ್ಲಿಗೆ ಜು.31ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಭಾವಚಿತ್ರ ಮತ್ತು ದೂರವಾಣಿ ಸಂಖ್ಯೆ ಇಲ್ಲದ ಅರ್ಜಿಗಳನ್ನು ಮೊದಲ ಹಂತದಲ್ಲೇ ತಿರಸ್ಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9886060342 ಸಂಪರ್ಕಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net