ಪ್ರತಿಭಾ ಕಾರಂಜಿ; ಕೇವಲ ಪ್ರಶಸ್ತಿ ನೀಡಲು ಮಾತ್ರವಲ್ಲ

SKP WEB 23
Published on

ಶಿಕಾರಿಪುರ: ಓದಿನ ಜತೆಗೆ ಮಕ್ಕಳ ಪ್ರತಿಭೆಗಳ ಅನಾವರಣವೂ ಆಗಬೇಕು. ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಪ್ರಕಾಶಿಸುವಂತೆ ಮಾಡುತ್ತವೆ ಎಂದು ಬಿಇಒ ಜಿ.ಎಸ್.ಶಶಿಧರ್ ಹೇಳಿದರು.

ನಗರದ ಜುಬೇದಾ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಲ್ಲಿ ಆರೋಗ್ಯಕರವಾಗಿ ಸ್ಪರ್ಧೆಗಳು ನಡೆಯುತ್ತವೆ. ಕೇವಲ ಪ್ರಶಸ್ತಿ, ಪುರಸ್ಕಾರಕ್ಕಾಗಿ ಅಲ್ಲ. ಎಷ್ಟೋ ಮಕ್ಕಳಿಗೆ ತಮ್ಮಲ್ಲಿನ ಪ್ರತಿಭೆಯ ಅರಿವೇ ಇರುವುದಿಲ್ಲ. ಅವರ ಪ್ರತಿಭೆಯನ್ನು ಅವರಿಗೆ ತಿಳಿಯುವಂತೆ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.

ಉರ್ದು ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಹಾಫೀಜ್ ಕರ್ನಾಟಕಿ ಮಾತನಾಡಿ, ಮಕ್ಕಳು ಮಣ್ಣಿನ ಮುದ್ದೆಯಂತೆ. ನಾವು ಯಾವ ಮೂರ್ತಿಯನ್ನಾದರೂ ಮಾಡಬಹುದು. ನಾವು ಅವರಿಗೆ ಮೊದಲು ಸೌಹಾರ್ದತೆ, ಸಹಬಾಳ್ವೆ ಕಲಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net