ಪ್ರತಿಭಾ ಕಾರಂಜಿ ಉತ್ತಮ ವೇದಿಕೆ

web2
ನೇಸರಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ವಿದ್ಯಾರ್ಥಿನಿಯರು ಉದ್ಘಾಟಿಸಿದರು. ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ, ಬಿ.ಎನ್.ಕಸಾಳೆ, ಅಶೋಕ ವಕ್ಕಂದ ಇತರರು ಇದ್ದರು.
Published on

ನೇಸರಗಿ: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆ ಎಂದು ಬೈಲಹೊಂಗಲ ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಕಸಾಳೆ ಹೇಳಿದರು.

ಸಮೀಪದ ಮಲ್ಲಾಪೂರ ಕೆ.ಎನ್. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶುಕ್ರವಾರ ನೇಸರಗಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ನೇಸರಗಿ-ಮಲ್ಲಾಪೂರ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ ಮಾತನಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ಮಕ್ಕಳಿಗೆ ಕಲಿಕೆ ಜತೆ ಅವರ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿಯಂತಹ ವಿನೂತನ ಕಾರ್ಯಕ್ರಮ ನೆರವಾಗಿದೆ ಎಂದರು.

ಗ್ರಾಪಂ ಅಧ್ಯಕ್ಷ ಅಶೋಕ ವಕ್ಕುಂದ, ಸಿಆರ್‌ಪಿ ಎಸ್.ಎಸ್.ಪಾಟೀಲ, ಮುಖ್ಯ ಶಿಕ್ಷಕರಾದ ಪ್ರಕಾಶ ದೇಶನೂರ, ಸುನೀಲ ಕಿತ್ತೂರ, ಶಿಕ್ಷಣ ಸಂಯೋಜಕ ಮಹೇಶ ಯರಗಟ್ಟಿ, ಬಿಆರ್‌ಪಿ ಅಜ್ಜಪ್ಪ ಅಂಗಡಿ, ಶಿವಪ್ಪ ಚಳಕೊಪ್ಪ, ರಾಜು ಹಕ್ಕಿ, ಎಸ್.ಜಿ.ಗಿರೆಪ್ಪಗೌಡ್ರ, ಬಿ.ಬಿ.ಸಾರಾಯದ, ವಿ.ಎಸ್.ಹುಣಶಿಕಟ್ಟಿ, ಮುಖ್ಯೋಪಾಧ್ಯಾಯ ಶರಣು ಎಂ.ಎಸ್, ಎಸ್‌ಡಿಎಂಸಿ ಅಧ್ಯಕ್ಷೆ ರೇಖಾ ಚಿಕ್ಕಬಸಣ್ಣವರ, ಬಸಪ್ಪ ಬುರಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net