ಪ್ರತಿಭಾ ಕಾರಂಜಿ ಅನುದಾನ ಹೆಚ್ಚಿಸಿ

ldh prathibha
ಕೃಷ್ಣಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಡೇವಾ ಗ್ರಾಪಂ ಅಧ್ಯಕ್ಷೆ ಭಾರತಿ ಸಿ. ರಾಜಪ್ಪ ಬಹುಮಾನ ವಿತರಿಸಿದರು. ಜಿ.ಎಸ್.ರಚನಾ ಶ್ರೀನಿವಾಸ್, ಎನ್.ಜಿ.ರಮೇಶ್, ತಿಮ್ಮಪ್ಪ ಇತರರಿದ್ದರು.
Published on

ಲಿಂಗದಹಳ್ಳಿ: ಸರ್ಕಾರ ಕ್ರೀಡಾಕೂಟ ಮತ್ತು ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ನೀಡುವ 6 ಸಾವಿರ ರೂಪಾಯಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಕಾಗುತ್ತಿಲ್ಲ. ಆದ್ದರಿಂದ ಅಗತ್ಯ ಅನುದಾನ ನೀಡಬೇಕು ಎಂದು ಉಡೇವಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಸಿ. ರಾಜಪ್ಪ ಒತ್ತಾಯಿಸಿದರು.

ಕೃಷ್ಣಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಭಾ ಕಾರಂಜಿಯಲ್ಲಿ ಮಕ್ಕಳು ಸ್ಪರ್ಧೆಗೆ ಮಹತ್ವ ನೀಡಬೇಕು ಎಂದರು.

ತರೀಕೆರೆ ತಾಪಂ ಕೆಡಿಪಿ ಸದಸ್ಯ ಜಿ.ಎಸ್.ರಚನಾ ಶ್ರೀನಿವಾಸ್ ಮಾತನಾಡಿ, ತಿಗಡ, ನಂದಿಬಟ್ಟಲು, ಉಡೇವಾ ಗ್ರಾಪಂಗಳ ವ್ಯಾಪ್ತಿಯಲ್ಲಿ ಅನೇಕ ಗ್ರಾಮಗಳ ಶಾಲೆಗಳಿಗೆ ಸಮರ್ಪಕ ಮೂಲ ಸೌಲಭ್ಯಗಳಿಲ್ಲ. ಅಂಥ ಗ್ರಾಮಗಳಲ್ಲಿ ಕೃಷ್ಣಾಪುರ ಗ್ರಾಮದ ಶಾಲೆಗೂ ಸೌಕರ್ಯ ಇಲ್ಲ. ಗ್ರಾಮದ ಯಾರೊಬ್ಬರೂ ಉನ್ನತ ಉದ್ಯೋಗಕ್ಕೆ ಹೋಗದೆ ಇರುವುದು ಬೇಸರದ ಸಂಗತಿ. ಎಲ್ಲರೂ ಸಾಕ್ಷರರಾಗುವ ಮೂಲಕ 15 ರಿಂದ 20 ಮಂದಿಯಾದರೂ ಉನ್ನತ ಉದ್ಯೋಗಕ್ಕೆ ಹೋಗಬೇಕು ಎಂದರು.

ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ತಣಿಗೆಬೈಲು ರಮೇಶ್ ಗೋವಿಂದೇಗೌಡ, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಟಿ.ಆಂಡಿಗೌಡ, ಗ್ರಾಪಂ ಸದಸ್ಯರಾದ ಲಕ್ಷ್ಮೀನಾಗರಾಜ್, ಶ್ರೀನಿವಾಸ್, ಮುಖ್ಯಶಿಕ್ಷಕ ತಿಮ್ಮಪ್ಪ, ಶಿಕ್ಷಕರ ಸಂಘದ ಪದಾಧಿಕಾರಿಗಳು, ಎಸ್‌ಡಿಎಂಸಿ ಪದಾಧಿಕಾರಿಗಳು, ಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net