ಪ್ರತಿಭಟನೆಗೆ ಜಿಲ್ಲೆಯ 1500 ಶಿಕ್ಷಕರು ಭಾಗಿ

Published on

ಬಳ್ಳಾರಿ : ರಾಜ್ಯ ಸರ್ಕಾರ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸೋಮವಾರ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ಹೋರಾಟದ ಹಿನ್ನಲೆ ಜಿಲ್ಲೆಯ ಒಂದರಿಂದ ಐದನೇ ತರಗತಿಗಳು ನಡೆದಿಲ್ಲ. ಒಟ್ಟಾರೆ ಜಿಲ್ಲೆಯಿಂದ 1500 ಜನ ಶಿಕ್ಷಕರು ಹೋರಾಟಕ್ಕೆ ತೆರಳಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಲಾಗದವರು ಒಂದು ದಿನ ರಜೆ ಹಾಕಿದ್ದರು. ಆದ್ದರಿಂದ, ಜಿಲ್ಲೆಯಲ್ಲಿ 1–5ನೇ ತರಗತಿಯ ವಿದ್ಯಾರ್ಥಿಗಳಿಗೆ ಉಪನ್ಯಾಸ ಗಳು ನಡೆದಿಲ್ಲ. 6–8ನೇ ತರಗತಿ ಶಿಕ್ಷಕರೇ ತರಗತಿಗಳನ್ನು ನಿಭಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net