ಪ್ರತಿಭಟನೆಗಳಿಗೆ ಅನುಮತಿ ನಿರಾಕರಣೆ

mysore
Published on

ಮೈಸೂರು: ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ನಡೆಸಿದ ಪಾದಯಾತ್ರೆ ಮತ್ತು ಸಂವಿಧಾನ ಪೀಠಿಕೆ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ ಎನ್ನಲಾದ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್.ಭಾಸ್ಕರ್ ಪ್ರಸಾದ್ ಹಾಗೂ ವಕೀಲ ಎಸ್.ಅರುಣ್ ಕುಮಾರ್ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಕರೆ ನೀಡಿದ್ದ ಎರಡು ಪ್ರತಿಭಟನೆಗಳಿಗೂ ಸೋಮವಾರ ಪೊಲೀಸರು ಅವಕಾಶ ನೀಡಲಿಲ್ಲ.

ಸಿದ್ಧಾರ್ಥನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸಂವಿಧಾನ ಸಂರಕ್ಷಣಾ ಸಮಿತಿ, ದಲಿತ ಸಂಘಟನೆಗಳ ಒಕ್ಕೂಟದ ನೂರಾರು ಪದಾಧಿಕಾರಿಗಳು ಪ್ರತಿಭಟನೆಗೆ ಮುಂದಾದರು. ಎರಡೂ ಗುಂಪುಗಳ ನಡುವೆ ಘರ್ಷಣೆ ಸಾಧ್ಯತೆ ಇತ್ತು. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನೆಗೆ ಪೊಲೀಸರು ಅವಕಾಶ ನಿರಾಕರಿಸಿದರು.

ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.

ಭಾಸ್ಕರ್ ಪ್ರಸಾದ್ ಬಂಧನ:

ಈ ನಡುವೆ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲು ಬಿ.ಆರ್.ಭಾಸ್ಕರ್ ಪ್ರಸಾದ್ ತಮ್ಮ ಬೆಂಬಲಿಗರೊಂದಿಗೆ ಬನ್ನೂರು ರಸ್ತೆಯ ಗೌತಮ ಬುದ್ಧ ವೃತ್ತಕ್ಕೆ ದೌಡಾಯಿಸಿದರು. ತಕ್ಷಣ ಪೊಲೀಸರು ಅವರನ್ನು ವಶಕ್ಕೆ ಪಡೆದು ಲಕ್ಷ್ಮೀಪುರಂ ಠಾಣೆಗೆ ಕರೆದೊಯ್ದರು.

ಎಡಿಸಿಗೆ ಮನವಿ: ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎನ್.ಭಾಸ್ಕರ್ ನೇತೃತ್ವದಲ್ಲಿ ಮುಖಂಡರು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅವರಿಗೆ ಮನವಿ ಸಲ್ಲಿಸಿದರು.

ಸಂವಿಧಾನ ಪೀಠಿಕೆ ಬಗ್ಗೆ ಲಘುವಾಗಿ ವಾತನಾಡಿ, ಜಾತಿ ಜಾತಿಗಳ ನಡುವೆ ಕೋಮು ಸೌಹಾರ್ದ ಹಾಳು ವಾಡುತ್ತಿರುವ ಎಸ್.ಅರುಣ್‌ಕುವಾರ್ ಮತ್ತು ಬಿ.ಆರ್. ಭಾಸ್ಕರ್ ಪ್ರಸಾದ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಎನ್.ಭಾಸ್ಕರ್ ಒತ್ತಾಯಿಸಿದರು.

ಎಸ್.ಅರುಣ್‌ಕುವಾರ್ ಮತ್ತು ಬಿ.ಆರ್.ಭಾಸ್ಕರ್ ಪ್ರಸಾದ್ ಅವರು ಸಂವಿಧಾನ ಪೀಠಿಕೆ ಬಗ್ಗೆ ಹಗುರವಾಗಿ ವಾತನಾಡಿದ್ದಾರೆ. ಬಲಗೈ ಸವಾಜದ ನಾಯಕರನ್ನು ಗುರಿಂಾಗಿಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜಾತಿ ಸಂಘರ್ಷ ಉಂಟು ವಾಡುತ್ತಾ ಸವಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದಾರೆ ಎಂದು ದೂರಿದರು.

ಒಳ ಮೀಸಲಾತಿ ಹೋರಾಟದಲ್ಲಿ ಬಲಗೈ ಸಮುದಾಯದ ವಿರುದ್ಧ ದ್ವೇಷ ಹರಡಲಾಗುತ್ತಿದೆ. ಇವರಿಬ್ಬರ ವಿರುದ್ಧ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಾಜಿ ಮೇಯರ್ ಪುರುಷೋತ್ತಮ್, ವಕೀಲ ಎಂ.ವಿ. ಚಂದ್ರಶೇಖರ್, ಮುಖಂಡರಾದ ಎಚ್.ಎಸ್.ಪುಟ್ಟರಸ, ಎ.ಆರ್.ಕಾಂತರಾಜು, ಡಾ.ಜ್ಞಾನಪ್ರಕಾಶ್, ಕೆ.ಗಂಗಾಧರ್, ಎಂ.ಕುವಾರಸ್ವಾಮಿ, ಎಂ.ಕೆ.ರೇವಣ್ಣ, ಶಿವಶಂಕರಮೂರ್ತಿ, ಎಸ್.ಪಿ. ಮಹೇಶ, ವಿಷ್ಣುವರ್ಧನ್, ಜಿ.ಮಹದೇವ, ಪುಟ್ಟರಾಜು, ಅನಂತ್‌ನಾಗ್, ಎನ್.ಸದಾನಂದ, ನಟರಾಜು, ಪುನೀತ್, ಶಂಕರ್, ಮೋಹನ್ ರಾಜು, ವಕೀಲ ಶ್ರೀನಿವಾಸ ಪ್ರಸನ್ನ, ಎಸ್.ಪ್ರಮೋದ್, ಜೆ.ಎಂ. ಶಿವಶಂಕರಮೂರ್ತಿ, ಎಂ.ಕೆ. ರೇವಣ್ಣ, ಶ್ರೀನಿವಾಸ, ಎಂ. ಪುಟ್ಟರಾಜು, ಮಹೇಶ್, ನಿತಿನ್ ಪುಟ್ಟಸ್ವಾಮಿ ಇದ್ದರು.

ಹೋರಾಟ ಹತ್ತಿಕ್ಕುವ ಉದ್ದೇಶದಿಂದ ಬಂಧನ

ರಾಜ್ಯಾದ್ಯಂತ ಹೋರಾಟ ನಡೆಸುತ್ತಿದ್ದು, ಆದರೆ, ಕಾರಣ ಹೇಳದೆ ಮೈಸೂರಿನ ಪೊಲೀಸರು ನಮ್ಮನ್ನು ಬಂಧಿಸಿ ಠಾಣೆಯಿಂದ ಠಾಣೆಗೆ ಸುತ್ತಾಡಿಸಿದ್ದಾರೆ. ಒಳ ಮೀಸಲಾತಿ ಜಾರಿಯಾಗದೆ ಬಡ್ತಿ ನೀಡುತ್ತಿರುವುದನ್ನು ವಿರೋಧಿಸಿ ನಾವು ಹೋರಾಟ ಕೈಗೊಳ್ಳಲಾಗಿದೆ. ಇದನ್ನು ಸಹಿಸಲಾಗದೆ ಸರ್ಕಾರವು ನಮ್ಮ ಹೋರಾಟವನ್ನು ಹತ್ತಿಕ್ಕಲು ಹುನ್ನಾರ ನಡೆಸಿದೆ. ನಮ್ಮನ್ನು ಬಂಧಿಸಿರುವುದಕ್ಕೆ ಪೊಲೀಸರು ಕಾರಣ ನೀಡುತ್ತಿಲ್ಲ ಬಿ.ಆರ್.ಭಾಸ್ಕರ್ ಪ್ರಸಾದ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net