ಪ್ರತಿಭಟನೆ ವೇಳೆ ಗೃಹಲಕ್ಷ್ಮಿ ಬ್ಯಾನರ್ ಹರಿದ ಪ್ರಕರಣ: ಬಿಜೆಪಿ 23 ಜನರ ಮೇಲೆ ಕೇಸ್ ದಾಖಲು

Crime Logo
Published on

ಪ್ರತಿಭಟನೆ ವೇಳೆ ಗೃಹಲಕ್ಷ್ಮಿ ಬ್ಯಾನರ್ ಹರಿದ ಪ್ರಕರಣ

ಬಿಜೆಪಿ 23 ಜನರ ಮೇಲೆ ಕೇಸ್ ದಾಖಲು

ಬೆಳಗಾವಿ: ಮುಸ್ಲಿಂ ಸಮುದಾಯಕ್ಕೆ ಸರ್ಕಾರಿ ಕಾಮಗಾರಿಗೆ ಗುತ್ತಿಗೆಯಲ್ಲಿ 4% ಮೀಸಲಾತಿ ಕಾಯ್ದೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಈಚೆಗೆ ನಗರ

ಬಿಜೆಪಿ ಕಾರ್ಯಕರ್ತರು ನಡೆಸಿದ್ದ ಪ್ರತಿಭಟನೆ ವೇಳೆ ಸರ್ಕಾರದ ಗೃಹಲಕ್ಷ್ಮಿ ಬ್ಯಾನ‌ರ್ ಹರಿದ ಬಿಜೆಪಿ ಮುಖಂಡರು ಸೇರಿ ಒಟ್ಟು 23 ಜನರ ವಿರುದ್ಧ ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ

ಪ್ರಕರಣ ದಾಖಲಾಗಿದೆ.

ಮುರಗೇಂದ್ರಗೌಡ ಪಾಟೀಲ್ ,ಶ್ವೇತಾ ಜಗದಾಳೆ, ಪ್ರಶಾಂತ ಅಮಿನಬಾವಿ,ಮಹಾಂತೇಶ ವಕ್ಕುಂದ ಸೇರಿ 23 ಜನರ ಮೇಲೆ ದೂರು ದಾಖಲಾಗಿದೆ. ಪ್ರತಿಭಟನೆಯಲ್ಲಿದ್ದ ಮಾಜಿ ಶಾಸಕರ ಹೆಸರನ್ನು ಪೊಲೀಸರು ಕೈಬಿಟ್ಟಿದ್ದಾರೆ.

ಮಾ. 23 ರಂದು ನಗರದ ಚೆನ್ನಮ್ಮ ವೃತ್ತದಲ್ಲಿ ಸದನದಲ್ಲಿ ಬಿಜೆಪಿಯ 18 ಶಾಸಕರ ಅಮಾನತು, ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಶೇಕಡಾ 4 ರಷ್ಟು ಮೀಸಲಾತಿ ನೀಡಿದ್ದನ್ನ ಖಂಡಿಸಿ ಪ್ರತಿಭಟನೆ ನಡೆಸಲಾಗಿತ್ತು.ಈ ವೇಳೆ

ಡಿಸಿ ಕಚೇರಿಯಲ್ಲಿ ಬಳಿಯಿರುವ ಸರ್ಕಾರದ ಗೃಹ ಲಕ್ಷ್ಮೀ ಬ್ಯಾನ‌ರ್ ಬಿಜೆಪಿ ಕಾರ್ಯಕರ್ತರು ಹರಿದು ಹಾಕಿದ್ದರು.

ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net