

ಚಿತ್ರದುರ್ಗ:ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತ ಪೂರ್ಣಗೊಳಿಸ ಬೇಕು,ಕೇಂದ್ರ ಸರ್ಕಾರ 2023ರ ಬಜೆಟ್‌ನಲ್ಲಿ ಈ ಯೋಜನೆಗೆ ಘೋಷಿಸಿರುವ 5300 ಕೋಟಿ ರೂ.ಅನುದಾನವನ್ನು ತಕ್ಷಣ ಬಿಡುಗಡೆಗೊಳಿಸಬೇಕು ಹಾಗೂ ವಿವಿ ಸಾಗರಕ್ಕೆ 5 ಟಿಎಂಸಿ ನೀರನ್ನು ಖಾತ್ರಿಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿರುವ ರೈತರ ಪ್ರತಿಭಟನೆ,ಮಂಗಳವಾರವೂ ಚಿತ್ರದು ರ್ಗ ಜಿಪಂ ಆವರಣದಲ್ಲಿರುವ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಅವರ ಕಚೇರಿ ಎದುರು ಮುಂದುವರಿಯಿತು.
ಹುಣಸಕಟ್ಟೆ ಗ್ರಾಮದ ಶ್ರೀ ಅಹೋಬಲ ನರಸಿಂಹಸ್ವಾಮಿ ಭಜನಾ ಮಂಡಳಿ ಸದಸ್ಯರು,ಭಜನೆ ನಡೆಸುವ ಮೂಲಕ ಪ್ರತಿಭಟನಾ ನಿರ ತರಿಗೆ ಸಾಥ್ ನೀಡಿದರು. ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನಾನಿರತರು ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕೈ ಗೊಂಡಿದ್ದಾರೆ.
ಅಖಂಡ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಪ್ರಮುಖರಾದ ಈಚಘಟ್ಟದ ಸಿದ್ದವೀರಪ್ಪ, ಡಿ.ಎಸ್.ಹಳ್ಳಿ ಮಲ್ಲಿ ಕಾರ್ಜುನ, ಶರಣಪ್ಪ, ಹುಣಸೇಕಟ್ಟೆ ಕಾಂತರಾಜ್,ರಾಜಶೇಖರಪ್ಪ, ಮಹಾದೇವಪ್ಪ,ಹಳಿಯೂರು ಸಿದ್ದಪ್ಪ,ಬಸವರಾಜಪ್ಪ, ರಾಮರೆಡ್ಡಿ,ನಾಗರಾಜ್ ರೆಡ್ಡಿ,ಮಂಜುನಾಥ್,ಆರ್.ಬಿ.ಲೋಕಣ್ಣ,ಮಂಜಣ್ಣ,ಶಂಕರಪ್ಪ,ಪ್ರಸನ್ನ ಹಾಗೂ ಅರುಂಧತಿ,ಜನಶಕ್ತಿಯ ಸಂಘಟನೆ ಶಫಿವುಲ್ಲ ಮತ್ತಿತರರು ಪ್ರತಿಭಟನಾ ನಿರತರು ಜಿಪಂ ಆವರಣದಲ್ಲೇ ಅಡುಗೆ ಮಾಡಿದ್ದರು.