ಪ್ರತಿಫಲಾಪೇಕ್ಷೆ ಇಲ್ಲದ ದಾನವೇ ಶ್ರೇಷ್ಠ

18
Published on

ಮೈಸೂರು: ದಾನ ಮಾಡುವ ಪ್ರವೃತ್ತಿ ಎಲ್ಲರಿಗೂ ಬೇಕು. ಪ್ರತಿಫಲಾಪೇಕ್ಷೆ ಇಲ್ಲದ ದಾನವೇ ಶ್ರೇಷ್ಠ, ಅಂತಹ ಫಲಪೇಕ್ಷೆ ಬಯಸದೇ ದಾನವನ್ನು ಸಂಘ ಸಂಸ್ಥೆಗಳು ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ದೇವರಾಜ ಸಂಚಾರ ಠಾಣೆಯ ವೃತ್ತ ನಿರೀಕ್ಷಕ ಮುನಿಯಪ್ಪ ಹೇಳಿದರು.
ಚಾಮುಂಡಿಪುರಂನಲ್ಲಿರುವ ಬಾಲ ಬೋಧಿನಿ ಶಾಲೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ನಿಗಮ ನಿಯಮಿತ ಅಧಿಕಾರಿಗಳ ವರ್ಗ ಹಾಗೂ ನೌಕರರ ಸಂಘ ಮತ್ತು ಚಾಮುಂಡೇಶ್ವರಿ ಕಾರು ಮಾಲೀಕರ ಮತ್ತು ಚಾಲಕರ ಸಂಘ ಹಾಗೂ ರವಿ ಸ್ನೇಹ ಬಳಗದಿಂದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 40 ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಪಡೆದ ಸಹಾಯವನ್ನು ಮುಂದೆ ಸ್ಥಿತಿವಂತರಾದಾಗ ಸಮಾಜಕ್ಕೆ ವಾಪಸ್ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಸಂಘಟನೆಗಳು ಹೆಚ್ಚಾಗಿ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಕೆ. ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ಮಾತನಾಡಿ, ಸರ್ಕಾರಿ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಮುಂದೆ ತಂದೆ, ತಾಯಿ, ಸಮಾಜಕ್ಕೆ ಒಳ್ಳೇಯ ಹೆಸರು ತರಬೇಕು. ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ವಿದ್ಯಾವಂತರನ್ನಾಗಿ ಮಾಡಬೇಕು ಎಂದರು.
ಶಾಲೆಯಲ್ಲಿ ಪ್ರತಿವರ್ಷ ಆರ್‌ಟಿಐ ಅಡಿಯಲ್ಲಿ ಆಯ್ಕೆಯಾದ ಮಕ್ಕಳಿಗೆ ಉಚಿತವಾಗಿ ಪಠ್ಯ ಪುಸ್ತಕ ನೀಡಲಾಗುವುದು ಸಂತೋಷ ತಂದಿದೆ. ಅದರಂತೆ ಈ ವರ್ಷ ಬಜೆಟ್ನಲ್ಲಿ ನೀಡಿರುವುದು ಸಂತಸ ತಂದಿದೆ ಎಂದರು. ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್, ಸಂಘಟಕರಾದ ರವಿ, ಸುಬ್ರಮಣ್ಯ, ದೀಪಕ್, ಶಾಲೆಯ ಮುಖ್ಯ ಶಿಕ್ಷಕಿ ಜಯಂತಿ, ಶಿಕ್ಷಕರಾದ ಲೀಲಾವತಿ, ಜತ್ತಿ, ಎಂ. ಡಿ.ಶ್ರೀನಿವಾಸ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net