ಪ್ರತಿಪಕ್ಷಗಳ ಅಪಪ್ರಚಾರಕ್ಕೆ ಅಸಮಾಧಾನ

CTD-CONG...
filter: 0; fileterIntensity: 0.0; filterMask: 0; module: j; hw-remosaic: 0; touch: (-1.0, -1.0); modeInfo: ; sceneMode: Hdr; cct_value: 0; AI_Scene: (-1, -1); aec_lux: 245.70992; hist255: 0.0; hist252~255: 0.0; hist0~15: 0.0;
Published on

ಚಿತ್ರದುರ್ಗ: ಗ್ಯಾರಂಟಿ ಸಹಿತ ವಿವಿಧ ಯೋಜನೆಗಳಡಿ ಒಂದು ಲಕ್ಷ ಕೋಟಿ ರೂ. ಫಲಾನುಭವಿಗಳಿಗೆ ಜಮಾ ಆಗಿದ್ದರೂ ರಾಜ್ಯ ಸರ್ಕಾರ ದಿವಾಳಿ ಆಗಿದೆ ಎಂದು ಪ್ರತಿಪಕ್ಷಗಳು ನಡೆಸುತ್ತಿರುವ ಅಪಪ್ರಚಾರದ ವಿರುದ್ಧ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್‌ಕುಮಾರ್ ಸೊರಕೆ ಕಿಡಿಕಾರಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಗ್ಯಾರಂಟಿಗಳಿಂದ ಆಗುತ್ತಿರುವ ಪ್ರಯೋಜನಗಳನ್ನು ಜನರಿಗೆ ತಲುಪಿಸಬೇಕಿದೆ ಎಂದರು.

ಚುನಾವಣಾ ಸಂದರ್ಭದಲ್ಲಿ ರಚನೆಯಾಗುತ್ತಿದ್ದ ಪ್ರಚಾರ ಸಮಿತಿಯನ್ನು ವರ್ಷದ ಎಲ್ಲ ದಿನಗಳಲ್ಲೂ ಕಾರ್ಯನಿರ್ವಹಿಸುವ ಸಲುವಾಗಿ ಎಐಸಿಸಿ ಶಾಶ್ವತವಾಗಿ ರಚಿಸಕಾಗಿದೆ. ರಾಜ್ಯದಲ್ಲಿ 59 ಸಾವಿರ ಬೂತ್‌ಗಳಿವೆ. ಸಮಿತಿಗೆ ಪ್ರತಿ ಬೂತ್‌ಮಟ್ಟದಿಂದ ಇಬ್ಬರನ್ನು ಆಯ್ಕೆ ಮಾಡಲಾಗುವುದು. ಜಿಲ್ಲಾ ಮತ್ತು ತಾಪಂ ಚುನಾವಣೆಗಳನ್ನು ಎದುರಿಸಲು ಕಾರ್ಯಕರ್ತರು ಸಜ್ಜಾಗಬೇಕು. ಜನರ ಆದಾಯ ಹೆಚ್ಚಾಗಲು ಸಿದ್ದರಾಮಯ್ಯ ನೇತೃತ್ವದ ರಾಜ್ಯಸರ್ಕಾರ ಕಾರಣ ಎಂಬುದನ್ನು ಜನರಿಗೆ ತಿಳಿಸಬೇಕಿದೆ ಎಂದರು.

ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷೆ ಜಲಜನಾಯ್ಕ, ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ, ಡಿಸಿಸಿ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಜಿಪಂ ಮಾಜಿ ಸದಸ್ಯ ನರಸಿಂಹರಾಜು, ಶಿವಮೂರ್ತಿ, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಸಂಪತ್‌ಕುಮಾರ್, ಕುಮಾರಗೌಡ, ಗೀತಾನಂದಿನಿಗೌಡ, ಎನ್.ಡಿ. ಕುಮಾರ್, ಲೋಕೇಶ್, ಭೂತೇಶ್, ನೇತ್ರಾವತಿ, ವೆಂಕಟೇಶ್, ಲಕ್ಷ್ಮೀಕಾಂತ್, ಮಂಜುನಾಥ್, ಖುದ್ದೂಸ್, ನಜ್ಮಾತಾಜ್, ಡಾ. ಸಂತೋಷ ಕುಮಾರ್, ಮಧುಗೌಡ, ಖಲಿಂವುಲ್ಲಾ, ಶಿವಣ್ಣ, ಶಿವಕುಮಾರ್, ರಾಧಮ್ಮ, ರುದ್ರಾಣಿ ಗಂಗಾಧರ್ ಇತರರು ಇದ್ದರು.

ಜಯಸಿಕ್ಕಿದೆ

ಮತಗಳ್ಳತನ ವಿರುದ್ಧದ ಹೋರಾಟ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಿರುವುದು ಕೇಂದ್ರ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರಿಗೆ ಸಂದ ಜಯವಾಗಿದೆ ಎಂದು ವಿನಯಕುಮಾರ್ ಸೊರಕೆ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮತಗಳ್ಳತನ ಇಡೀ ದೇಶಕ್ಕೆ ವ್ಯಾಪಿಸಿದೆ. ಈ ಕುರಿತು ರಾಜ್ಯದ ಜನರ ಗಮನ ಸೆಳೆಯಲು ಕೆಪಿಸಿಸಿ ಪ್ರಚಾರ ಸಮಿತಿ ಪ್ರವಾಸ ಹಮ್ಮಿಕೊಂಡಿದೆ. ಬಿಜೆಪಿ ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಎಲ್ಲರ ಭಾವನೆಗಳಿಗೆ ಗೌರವ ನೀಡುತ್ತದೆ ಮತ್ತು ಬದುಕು ಕಟ್ಟಿಕೊಡುವ ರಾಜಕಾರಣ ಮಾಡುತ್ತಿದೆ. ಮತಗಳ್ಳತನ ತಡೆಗೆ ಹಾಗೂ ಪಕ್ಷದ ಕಾರ್ಯಕ್ರಮಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net