ಪ್ರತಿನಿಧಿ ವೆಂಕಟರಮಣ ದೇಗುಲದಲ್ಲಿನವರಾತ್ರಿ ರಥೋತ್ಸವ ವೈಭವ

ydg3
ಸುರಪುರದ ಪ್ರತಿನಿಧಿ ವೆಂಕಟರಮಣ ದೇವಸ್ಥಾನದಲ್ಲಿ ರಥೋತ್ಸವ ಜರುಗಿತು.
Published on

ಸುರಪುರ: ನಗರದ ಪುರಾತನ ಮತ್ತು ಐತಿಹಾಸಿಕ ಹಿನ್ನೆಲೆಯ ಪ್ರತಿನಿಧಿ ಮನೆತನದ ವೆಂಕಟೇಶ್ವರ ದೇವಸ್ಥಾನದಲ್ಲಿ ಒಂಬತ್ತು ದಿನದ ನವರಾತ್ರಿ ನಿಮಿತ್ತ ಶುಕ್ರವಾರ ರಥೋತ್ಸವ ನೆರವೇರಿತು. ಒಂಬತ್ತು ದಿನ ವಿವಿಧ ವಾಹನೋತ್ಸವ, ನಾರಾಯಣಾಚಾರ್ಯ ಐಜಿ ಪೌರೋಹಿತ್ಯದಲ್ಲಿ ವೆಂಕಟೇಶ್ವರ ಮಹಾತ್ಮೆ ಪುರಾಣ ಹಾಗೂ ಹೋಮ-ಹವನಾದಿ ಕೈಂಕರ್ಯ ಜರುಗಿದವು. ಅರ್ಚಕ ವಾದಿರಾಜ ಬೂದುರು, ಪ್ರತಿನಿಧಿ ಮನೆತನದ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಪಿ.ಎಸ್. ದಿನೇಶಕುಮಾರ, ಪ್ರಮುಖರಾದ ರಮೇಶಕುಮಾರ ಪ್ರತಿನಿಧಿ, ವೇಣುಗೋಪಾಲ ಪ್ರತಿನಿಧಿ, ಮಧ್ವರಾಜ ಪ್ರತಿನಿಧಿ, ಡಾ.ಬಿ.ಆರ್. ಜಹಗೀರದಾರ, ರಾಘವೇಂದ್ರರಾವ ಬಾಡಿಯಾಳ, ಶ್ರೀನಿವಾಸಚಾರ್ಯ ಗುಡಿ, ಗುರುರಾಜ ಪಾಲ್ಮೂರ, ಪ್ರಮೋದ ಜಹಗೀರದಾರ, ನರಸಿಂಹರಾವ ಬಾಡಿಯಾಳ, ವೆಂಕಟೇಶ ಭಕ್ರಿ, ನರಸಿಂಹ ಭಂಡಿ, ಬಾದರಾಯಣಾಚಾರ್ಯ ಪಾಲ್ಮೂರ, ಮುಕುಂದರಾವ ಶಾರದಹಳ್ಳಿ, ಧೀರೇಂದ್ರ ಕುಲಕರ್ಣಿ, ರಾಘವೇಂದ್ರ ಭಕ್ರಿ, ಶ್ರೀನಿಧಿ ಐಜಿ, ಶ್ರೀಕರ ಐಜಿ, ಕೇಶವ ಗುಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net