ಪ್ರತಿ ಶಾಲೆಯಲ್ಲೂ ಸೇವಾದಳ ಶಾಖೆ ತೆರೆಯಿರಿ

IMG-20230714-WA0097
Published on

ಹನೂರು: ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಬೆಳೆಸುವ ನಿಟ್ಟಿನಲ್ಲಿ ಪ್ರತಿ ಶಾಲೆಯಲ್ಲೂ ಸೇವಾದಳ ಶಾಖೆಯನ್ನು ತೆರೆಯಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಶಿವರಾಜು ತಿಳಿಸಿದರು.
ಪಟ್ಟಣದ ಸರ್ಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ತಾಲೂಕು ಭಾರತೀಯ ಸೇವಾದಳ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ವತಿಯಿಂದ ಶಿಕ್ಷಕರಿಗಾಗಿ ಆಯೋಜಿಸಿದ್ದ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಭಾರತೀಯ ಸೇವಾದಳ ಸಂಸ್ಥೆಯು ಸ್ವಾತಂತ್ರ್ಯ ಗಳಿಸಲು ಹಿಂದೂಸ್ತಾನಿ ಸೇವಾದಳದ ಹೆಸರಿನಲ್ಲಿ ಸ್ಥಾಪನೆಯಾಗಿ ಸಂಘಟನೆಯ ರೂಪ ಪಡೆದುಕೊಂಡಿತು. ಈ ದಿಸೆಯಲ್ಲಿ ಸೇವಾದಳ ಸಂಸ್ಥೆಯು ಶಾಲಾ ಕಾಲೇಜುಗಳಲ್ಲಿ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರೀಯ ಭಾವೈಕ್ಯತಾ ಮೇಳ, ಮಕ್ಕಳ ನಾಯಕತ್ವ ಶಿಬಿರಗಳನ್ನು ಆಯೋಜಿಸಿಕೊಂಡು ಬಂದಿದೆ. ದೇಶಪ್ರೇಮ ಬೆಳೆಸುವಲ್ಲಿ ಈ ಸಂಸ್ಥೆಯ ಪಾತ್ರ ಹಿರಿದು. ಆದ್ದರಿಂದ ಪ್ರತಿ ಶಾಲೆಯಲ್ಲೂ ಶಿಕ್ಷಕರು ಸೇವಾದಳದ ಶಾಖೆ ತೆರೆದು ಮಕ್ಕಳಲ್ಲಿ ದೇಶಪ್ರೇಮ ಬೆಳೆಸಬೇಕು. ಈ ಮೂಲಕ ಅಗತ್ಯ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ಭಾರತ ಸೇವಾ ದಳದ ತಾಲೂಕು ಸಮಿತಿ ಅಧ್ಯಕ್ಷ ಪುರಂದರರಾಮ್, ಉಪಾಧ್ಯಕ್ಷ ಗಿರೀಶ್, ಜಿಲ್ಲಾ ಸಂಘಟಕ ಇ.ಅರುಣ್, ರಾಜ್ಯ ಸಂಪನ್ಮೂ ಶಿಕ್ಷಕ ಪಳನಿಸ್ವಾಮಿ ಜಾಗೇರಿ, ಅಧಿನಾಯಕ ಜೋಸೆಫ್, ಕಾರ್ಯದರ್ಶಿ ಸೆಂದಿಲ್ ಕುಮಾರ್, ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ, ಶಿಕ್ಷಕರಾದ ಧರ್ಮಲಿಂಗಂ, ಅಬ್ದುಲ್ ಜಮೀರ್, ರೋಸಿ ಮೇರಿ, ಪ್ರದೀಪ್‌ಕುಮಾರ್, ಮದಳಿಯಮ್ಮಾಳ, ಧನರಾಜ್ ಮೋಚರಾಗಿಣಿ, ರಾಜಪ್ಪ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net