ಪ್ರತಿ ಮಹಿಳೆಯೂ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು

CTD PRATIBOTSVA ).jpg------
Published on

ಚಿತ್ರದುರ್ಗ: ಪ್ರತಿ ಮಹಿಳೆಯೂ ತನ್ನದೇ ಆದ ಹಣಕಾಸಿನ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕೆಂದು ನ್ಯಾಯವಾದಿ ಡಿ.ಕೆ.ಶೀಲಾ ಹೇಳಿದರು. ದಾವಣಗೆರೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹಯೋಗದಲ್ಲಿ ನಗರದ ಜಿ.ಜಿ.ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಪ್ರತಿಭೋತ್ಸವ ಸಮಾರಂಭದಲ್ಲಿ ಮಾತನಾಡಿ,ನಮ್ಮಿಂದ ಹಾಗೂ ನಮ್ಮ ಕುಟುಂಬದಿಂದಲೇ ಸಮಾನತೆ ಶುರುವಾಗಬೇಕು.ಪಾಲಕರು ಗಂಡು,ಹೆಣ್ಣು ಇಬ್ಬರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕು.ನಮ್ಮನ್ನು ನಾವು ಬದಲಾಯಿಸಿಕೊಳ್ಳುವ ಮೂಲಕ ಬದಲಾವಣೆ ಪ್ರಾರಂಭವಾಗಬೇಕೆಂದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ಎಚ್.ಗುಡ್ಡದೇಶ್ವರಪ್ಪ ಮಾತನಾಡಿ, ಮಹಿಳಾ ಕಾಲೇಜಿನ ನೂತನ ಕಟ್ಟಡಕ್ಕೆ ಕೆಎಂಇಆರ್‌ಸಿಯಿಂದ 25 ಕೋಟಿ ರೂ.ಆಡಳಿತಾತ್ಮಕ ಅನುಮೋದನೆ ದೊರೆತ್ತಿದ್ದು,ಟೆಂಡರ್ ಪ್ರಕ್ರಿಯೆ ನಡೆದಿದೆ. ವಿದ್ಯಾರ್ಥಿಗಳ ಮೂಲ ಸೌ ಕರ್ಯಕ್ಕೆ 2 ಕೋಟಿ ರೂ.ಹಾಗೂ ವಿಶ್ರಾಂತಿ ಕೊಠಡಿಗೆ 1 ಕೋಟಿ ರೂ.ಮಂಜೂರಾಗಿದೆ ಎಂದರು.

ಮಹಿಳಾ ಸಿರಿ ವಾರ್ಷಿಕ ಸಂಚಿಕೆ ಬಿಡುಗಡೆ ಹಾಗೂ ಬಿಕಾಂ ಪದವಿಯಲ್ಲಿ ಉನ್ನತ ಶ್ರೇಣಿ ಪಡೆದ ಎಂ.ಜೆ.ಸಿಂಧು ಹಾಗೂ ಬಿಎ ಪದವಿಯಲ್ಲಿ ಉನ್ನತ ಶ್ರೇಣಿ ಪಡೆದ ಎಂ.ಎಸ್.ದೀಪಾ ಅವರಿಗೆ 3 ಸಾವಿರ ರೂ.ನಗದು ನೀಡಿ ಸನ್ಮಾನಿಸಲಾಯಿತು. 40 ಜನ ಉನ್ನತ ಶ್ರೇಣಿ ಪಡೆದ ಪ್ರತಿಭಾ ನ್ವಿತ ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ನಗದು,ಪ್ರಶಸ್ತಿ ಪತ್ರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ತೋರಿದ 180 ವಿ ದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಮಹಿಳಾ ಸಿರಿ ವಾರ್ಷಿಕ ಸಂಚಿಕೆ ಸಂಪಾದಕ ಡಾ.ಡಿ.ಒ.ಸಿದ್ದಪ್ಪ,ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಶಿವಣ್ಣ, ಅಧ್ಯಾಪಕರ ಸಂಘದ ಕಾರ‌್ಯದರ್ಶಿ ಡಾ.ಪಿ.ಎನ್.ಮಧುಸೂದನ,ಐಕ್ಯೂಎಸಿ ಸಂಚಾಲಕ ಹಲಸಂದಿ ಸತೀಶ, ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಎಚ್.ಶಕುಂತಲಾ,ಎನ್‌ಎಸ್‌ಎಸ್ ಕಾರ‌್ಯಕ್ರಮಾಧಿಕಾರಿ ಎಂ.ಗಿರೀಶ್,ಕ್ರೀಡಾ ಸಮಿತಿ ಸಂಚಾಲಕ ಆರ್.ಶಿವಪ್ರಸಾದ್,ಪತ್ರಾಂಕಿತ ವ್ಯವಸ್ಥಾಪಕ ಆರ್.ವೆಂಕಟೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net