ಪ್ರತಿ ಮಹಿಳೆಯರಿಗೂ ಕಾನೂನಿನ ತಿಳಿವಳಿಕೆ ಇರಬೇಕು:ಬಿ.ಕೆ. ರವಿಕಾಂತ್ ಸಲಹೆ

ಪ್ರತಿ ಮಹಿಳೆಯರಿಗೂ ಕಾನೂನಿನ ತಿಳಿವಳಿಕೆ ಇರಬೇಕು:ಬಿ.ಕೆ. ರವಿಕಾಂತ್ ಸಲಹೆ
Published on

ಹಾಸನ: ಪ್ರತಿ ಮಹಿಳೆಯರಿಗೂ ಕಾನೂನಿನ ತಿಳಿವಳಿಕೆ ಅತ್ಯಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಕೆ. ರವಿಕಾಂತ್ ಅಭಿಪ್ರಾಯಪಟ್ಟರು.

ಶ್ರೀನಗರ ಬಡಾವಣೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಲಹರಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಮಂಗಳವಾರ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಮಹಿಳೆಯರಿಗೆ ಕಾನೂನಿನಲ್ಲಿ ಸಾಕಷ್ಟು ರಕ್ಷಣೆ ಇದ್ದು, ಇದರ ಅರಿವು ಹೊಂದಿ ರಕ್ಷಣೆ ಪಡೆಯಬೇಕು. ಕೌಟುಂಬಿಕ ದೌರ್ಜನ್ಯ, ಮಾನಸಿಕ ಹಿಂಸೆ, ಶೋಷಣೆ ಇದ್ದ ಸಂದರ್ಭದಲ್ಲಿ ಮಹಿಳೆಯರು ತಮಗಿರುವ ಕಾನೂನಿನ ರಕ್ಷಣೆ ಪಡೆಯಬೇಕು. ಆದರೆ ಯಾವುದೇ ಕಾರಣದಿಂದ ಕಾನೂನಿನ ದುರುಪಯೋಗ ಆಗಬಾರದು ಎಂದು ಕಿವಿಮಾತು ಹೇಳಿದರು.

ಹಾಸನ ಉಪವಿಭಾಗದ ಡಿವೈಎಸ್ಪಿ ಮುರಳೀದರ್ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆಗಾಗಿಯೇ ವಿಶೇಷ ತಂಡ ಇದ್ದು ಅವರ ಹಕ್ಕುಗಳ ರಕ್ಷಣೆಗೆ ವಿಶೇಷ ಆದ್ಯತೆ ಇದೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ವಿಶೇಷ ಆದ್ಯತೆ ನೀಡಿ ನೊಂದ ಮಹಿಳೆಯರಿಗೆ ಕಾನೂನಾತ್ಮಕ ರಕ್ಷಣೆ ನೀಡುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತದೆ. ಫೋಕ್ಸೋ ಕಾನೂನು ಅತ್ಯಂತ ಕಠಿಣವಾಗಿದ್ದು, ಈ ಕಾಯ್ದೆಯಡಿ ಕೇಸ್ ದಾಖಲಾದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಹಾಗಾಗಿ ಯಾರೂ ಕೂಡ ಇಂತಹ ಅಪರಾಧದಲ್ಲಿ ಭಾಗಿಯಾಗಬಾರದು ಹಾಗು ಸಹಾಯ ಕೂಡ ಮಾಡಬಾರದು ಎಂದು ಕಾನೂನಿನ ಬಗ್ಗೆ ಮಾಹಿತಿ ನೀಡಿದರು.

ಲಹರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಬಿ. ವೇದಾವತಿ, ನಗರಸಭೆ ಅಧ್ಯಕ್ಷ ಆರ್. ಮೋಹನ್, ಶ್ರೀನಗರದ ಶಾಂತಾ, ಕವಿತಾ ಇದ್ದರು.

--

ಫೋಟೋ ಶೀರ್ಷಿಕೆ

11 ಎಚ್‌ಎಸ್‌ಎನ್ 11

ಶ್ರೀನಗರ ಬಡಾವಣೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಲಹರಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಮಂಗಳವಾರ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ನ್ಯಾ.ಬಿ.ಕೆ. ರವಿಕಾಂತ್ ಉದ್ಘಾಟಿಸಿದರು. ಈ ವೇಳೆ ಡಿವೈಎಸ್ಪಿ ಮುರಳೀದರ್, ಬಿ. ವೇದಾವತಿ, ನಗರಸಭೆ ಅಧ್ಯಕ್ಷ ಆರ್. ಮೋಹನ್, ಶ್ರೀನಗರದ ಶಾಂತಾ, ಕವಿತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net