ಪ್ರತಿ ಮನೆಯಲ್ಲೂ ದೇಶಭಕ್ತರು ಜನಿಸಲಿ

24Ravig6
ಬೆಳಗಾವಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಡಾ.ಎಸ್.ವಿ.ಗೋರಬಾಳ, ಪೃಥ್ವಿ ಕುಮಾರ, ಆನಂದ ಹೊಸೂರ, ರೋಹಿತ್ ಉಮನಾಬಾದಿಮಠ ಇದ್ದರು.
Published on

ಬೆಳಗಾವಿ: ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿರಿಸಿದ ಭಗತಸಿಂಗ್ ಒಬ್ಬ ಮಹಾನ್ ದೇಶಭಕ್ತ ಕ್ರಾಂತಿಕಾರಿ. ಅವರಂತಹ ದೇಶಭಕ್ತರು ಭಾರತದ ಪ್ರತಿ ಮನೆ ಮನೆಗಳಲ್ಲಿ ಜನಿಸಬೇಕು ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಮಂಗಳೂರು ವಿಭಾಗ ಪ್ರಮುಖ ಪ್ರೊ.ಕೇಶವ ಬಂಗೇರ ಹೇಳಿದರು. ಬೆಳಗಾವಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹಾಗೂ ರೆಡ್ ಕ್ರಾಸ್ ಸಂಸ್ಥೆ ಬುಧವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ಯುವಕರನ್ನು ರಾಷ್ಟ್ರೀಯ ಮುಖ್ಯ ವಾಹಿನಿಗಳಲ್ಲಿ ತೆಗೆದುಕೊಂಡು ಹೋಗುವ ದಿಸೆಯಲ್ಲಿ ವಿದ್ಯಾರ್ಥಿ ಪರಿಷತ್ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.ಎಬಿವಿಪಿ ಬೆಳಗಾವಿ ನಗರ ಘಟಕದ ಅಧ್ಯಕ್ಷ ಡಾ.ಎಸ್.ವಿ.ಗೋರಬಾಳ, ಎಬಿವಿಪಿ ಸಂಘಟನಾ ಜಂಟಿ ಕಾರ್ಯದರ್ಶಿ ಪೃಥ್ವಿ ಕುಮಾರ, ಭರತೇಶ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಆನಂದ ಹೊಸೂರ, ವಿದ್ಯಾರ್ಥಿ ಪರಿಷತ್‌ನ ರಾಜ್ಯ ಜಂಟಿ ಕಾರ್ಯದರ್ಶಿ ರೋಹಿತ್ ಉಮನಾಬಾದಿಮಠ, ವಿದ್ಯಾರ್ಥಿ ಪರಿಷತ್‌ನ ಬೆಳಗಾವಿ ನಗರ ಕಾರ್ಯದರ್ಶಿ ಕೃಷ್ಣಕುಮಾರ ಜೋಶಿ, ಮಲ್ಲಿಕಾರ್ಜುನ ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net