ಪ್ರತಿ ಮನೆಯಲ್ಲಿ ಕನ್ನಡ ಆಡುಭಾಷೆಯಾಗಬೇಕು

30 ckm 11
ಚಿಕ್ಕಮಗಳೂರು ಮಲ್ಲಂದೂರು ರಸ್ತೆ ಸಮೀಪ ಭಗತ್‌ಸಿಂಗ್ ಆಟೋ ನಿಲ್ದಾಣದಲ್ಲಿ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಶಾದಮ್ ಅಲಂಖಾನ್, ಮಲ್ಲಿಕಾರ್ಜುನ್, ಶೇಖರ್, ಮೆಹಬೂಬ್ ಪಾಷಾ, ರಂಗ, ರಾಜೇಗೌಡ, ನಿಂಗಶೆಟ್ಟಿ, ಮೋಹನ್, ಜಾಕೀರ್, ಮಹೇಶ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಕನ್ನಡ ನುಡಿ ಪ್ರತಿ ಮನೆಯಲ್ಲೂ ಆಡುಭಾಷೆಯಾಗಿ ಪ್ರಜ್ವಲಿಸ ಬೇಕು. ಕರ್ನಾಟಕದ ಪರಂಪರೆಯನ್ನು ಕನ್ನಡಿಗರು ಎತ್ತಿಹಿಡಿಯುವ ಕೆಲಸ ಮಾಡಬೇಕು ಎಂದು ನಗರಸಭೆ ಸದಸ್ಯ ಶಾದಮ್ ಆಲಂಖಾನ್ ತಿಳಿಸಿದರು.

ನಗರದ ಮಲ್ಲಂದೂರು ರಸ್ತೆ ಸಮೀಪ ಭಗತ್‌ಸಿಂಗ್ ಆಟೋ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ಧ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶನಿವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಚಾಲಕರು ಆಟೋದಲ್ಲಿ ಕುಣಿತುಕೊಳ್ಳುವ ಪ್ರಯಾಣಿಕರೊಂದಿಗೆ ಕನ್ನಡದಲ್ಲಿ ಮಾತನಾಡುವ ಮೂಲಕ ಕನ್ನಡ ಭಾಷೆಯನ್ನು ಪ್ರವಾಸಿಗರು ಕಲಿಸುತ್ತಿದ್ದಾರೆ. ಜೊತೆಗೆ ಆಟೋದಲ್ಲಿ ಸುತ್ತಮುತ್ತಲು ಕವಿಗಳು, ಸಾಹಿತಿಗಳ ಹಾಗೂ ಕನ್ನಡಬಾವುಟವನ್ನು ಅಳವಡಿಸಿ ಭಾಷಾಭಿಮಾನ ಮೂಡಿಸುತ್ತಿದ್ದಾರೆ ಎಂದರು.

ನವೆAಬರ್ ತಿಂಗಳಲ್ಲಿ ರಾಜ್ಯದಲ್ಲಿ ಆಚರಿಸುವ ರಾಜ್ಯೋತ್ಸವದ ವೈಭವ ಇನ್ನೆಲ್ಲೂ ಕಾಣಲಾಗದ ಸಂಭ್ರಮ. ರಾಜ್ಯೋತ್ಸವದ ವೇಳೆ ಈ ನೆಲದ ಹೆಸರನ್ನು ಇತಿಹಾಸದಲ್ಲಿ ದಾಖಲಿಸಿದ ಮಹನೀಯರನ್ನು ನೆನೆಯುವ ಕಾರ್ಯ ನಮ್ಮದಾಗಬೇಕು ಎಂದು ತಿಳಿಸಿದರು.

ಆಟೋ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಕನ್ನಡಿಗರಾದ ನಾವು ನುಡಿ ಕನ್ನಡ, ನಡೆ ಕನ್ನಡ, ಉಸಿರು ಕನ್ನಡ ಎಂದು ಜೀವಿಸಬೇಕು. ಕನ್ನಡದ ಬಗ್ಗೆ ಹೆಮ್ಮೆ ಪಡುವ ವಿಷಯ ಹಾಗೂ ನಾಡಿನ ಭಾಷೆಯ ಇತಿಹಾಸವನ್ನು ಎಲ್ಲೆಡೆ ಪರಿಚಯಿಸುವ ಮೂಲಕ ಅಭಿಮಾನ ತೋರಬೇಕು ಎಂದರು.

ಕನ್ನಡಭಾಷೆ ಮಾತೃ ಸಮಾನವಿದ್ಧಂತೆ. ತಾಯಿಗೆ ಸಲ್ಲಿಸುವ ಗೌರವವನ್ನು ಮಾತೃಭಾಷೆಗೆ ತೋರಬೇಕು. ಕನ್ನಡ ನಾಡು, ನುಡಿಗೆ ಅಗೌರವ ತೋರುವವರ ವಿರುದ್ಧ ನ್ಯಾಯಸಮ್ಮತದಿಂದ ಹೋರಾಡುವುದನ್ನು ರೂಢಿಸಿಕೊಂಡರೆ ಈ ನೆಲದಲ್ಲಿ ಹುಟ್ಟಿರುವುದು ಸಾರ್ಥಕವಾದಂತೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆಟೋ ಸಂಘದ ಉಪಾಧ್ಯಕ್ಷ ಶೇಖರ್, ಗೌರವಾಧ್ಯಕ್ಷ ಮೆಹಬೂಬ್‌ಭಾಷ, ಖಜಾ ಂಚಿ ರಂಗ, ಚಾಲಕರಾದ ರಾಜೇಗೌಡ, ನಿಂಗಶೆಟ್ಟಿ, ಮೋಹನ್, ಮೋಹನ್‌ಕುಮಾರ್, ಜಾಕೀರ್, ಮಹೇಶ್, ಕಿರಣ್, ವಾಜೀದ್, ಶಿವಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net