

ಹುಮನಾಬಾದ್: ಗ್ರಾಮೀಣ ಭಾಗದ ಪ್ರತಿ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯಬೇಕು ಎಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ನಿಗದಿತ ಅವಧಿಯೊಳಗೆ ಪೂರ್ತಿಗೊಳಿಸಬೇಕು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ತಾಕೀತು ಮಾಡಿದರು.
ವಡ್ಡನಕೇರಾದಲ್ಲಿ ಜಲ್ ಜೀವನ್ ಮಿಷನ್ ಯೋಜನೆ ಅಡಿ ಸುಮಾರು ೧.೨೩ ಕೋಟಿ ರೂ. ವೆಚ್ಚದಲ್ಲಿ ೫೨೩ ಮನೆಗೆ ನೀರು ಪೂರೈಸುವ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿ, ಸರ್ಕಾರದ ಕೆಲಸವೆಂದು ಗ್ರಾಮಸ್ಥರು ನಿರ್ಲಕ್ಷಿಸಬಾರದು. ತಮ್ಮ ಮನೆ ಕೆಲಸ ಎಂದು ಗುಣಮಟ್ಟ ಕಾಪಾಡುವಂತೆ ನೋಡಿಕೊಳ್ಳಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿಬಾಯಿ, ಸದಸ್ಯರಾದ ಸಚಿನ ನಾಂದೇಡಕರ್, ಬಿಲಾಲ್ ಶೇರಿಕಾರ್, ಅಫ್ಜಲ್ ಪಟೇಲ್, ಚನ್ನಮ್ಮ ಹಡಪದ, ಮುಖಂಡರಾದ ವೀರಶೆಟ್ಟಿ ಬಾಶೆಟ್ಟಿ, ಕಾಶೀನಾಥ ಕೂಡಂಬಲ್, ರಾಜಪ್ಪ ಕೂಡಂಬಲ್, ಮಲ್ಲಿಕಾರ್ಜುನ ಸೀಗಿ, ರಾಜುರಡ್ಡಿ ಮೇಹಕರ್ ಇತರರಿದ್ದರು.