

ಹುಣಸಗಿ: ಕ್ಷೇತ್ರದ ಮನೆ ಮನೆಗೆ ತೆರಳಿ ಬಿಜೆಪಿ ಸದಸ್ಯತ್ವ ಮಾಡಿಸುವ ಮೂಲಕ ಪಕ್ಷ ನೀಡಿದ ಗುರಿ ಕರ‍್ಯಕರ್ತರು ತಲುಪಬೇಕು ಎಂದು ಮಾಜಿ ಸಚಿವ, ಪಕ್ಷದ ಉಪಾಧ್ಯಕ್ಷ ನರಸಿಂಹನಾಯಕ (ರಾಜುಗೌಡ) ಹೇಳಿದರು.
ತಾಲೂಕಿನ ಖೋಜಾಪುರದಲ್ಲಿ ಗುರುವಾರ ಹುಣಸಗಿ-ಸುರಪುರ ಮಂಡಲದಿAದ ಹಮ್ಮಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರ 74ನೇ ಜನ್ಮದಿನಾಚರಣೆ, ಸದಸ್ಯತ್ವ ಅಭಿಯಾನ ಹಾಗೂ ಸಸಿ ನೆಡುವ ಕರ‍್ಯಕ್ರಮದಲ್ಲಿ ಮಾತನಾಡಿ, ಬಿಜೆಪಿ ವಿಶ್ವದ ಅತಿ ದೊಡ್ಡ ರಾಜಕೀಯ ಹಾಗೂ ಪ್ರಜಾಸತ್ತಾತ್ಮಕ ಪಕ್ಷವಾಗಿದೆ. ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಸದಸ್ಯತ್ವ ಅಭಿಯಾನ ಮಾಡಿಕೊಂಡು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಲಾಭ ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಪಾಟೀಲ ಯಾಳಗಿ ಮಾತನಾಡಿ, ದೇಶಾದ್ಯಂತ ಬಿಜೆಪಿ ಸದಸ್ಯತ್ವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಅ.2ರವರೆಗೂ ನಿರಂತರ ಸದಸ್ಯತ್ವ ಅಭಿಯಾನವು ಪಕ್ಷದ ಕರ‍್ಯಕರ್ತರು ಹಾಗೂ ತಂಡಗಳು ಮಾಡಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ಬಸವರಾಜಸ್ವಾಮಿ ಸ್ಥಾವರಮಠ ಮಾತನಾಡಿದರು. ಇದಕ್ಕು ಮುನ್ನ ಮಾಜಿ ಸಚಿವ ನರಸಿಂಹನಾಯಕ(ರಾಜುಗೌಡ) ಅವರು ಮೋದಿ ಅವರ ಜನ್ಮದಿನ ನಿಮಿತ್ತ ಸಸಿ ನೆಟ್ಟರು. ನಂತರ ಪಕ್ಷದ ಸದಸ್ಯತ್ವದ ಮಾದರಿ ಕುರಿತು ಕರ‍್ಯಕರ್ತರಿಗೆ ಮಾಹಿತಿ ನೀಡಿದರು.
ಬಸವರಾಜ ವಿಭೂತಿಹಳ್ಳಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮೇಲಪ್ಪ ಗುಳಗಿ, ಜಿಲ್ಲಾ ಉಪಾಧ್ಯಕ್ಷ ಪರಮಣ್ಣ ತೇರಿನ್, ಮುರೆಗಣ್ಣ ದೇಸಾಯಿ, ಬಸಣ್ಣ ದೇಸಾಯಿ ಬೈಲಕುಂಟಿ, ಬಸಣ್ಣ ಬಾಲಗೌಡ್ರು, ಯೂಸಫ್ ಡೆಕ್ಕನ್, ಸಿದ್ದನಗೌಡ ಪಾಟೀಲ್ ಕರಿಭಾವಿ, ವಿರೇಶ ಸಾಹುಕಾರ ಚಿಂಚೋಳಿ, ಬಸವರಾಜ ಮೇಲಿನಮನಿ, ಬಸನಗೌಡ ಹಣಮರೆಡ್ಡಿ ಕುಪ್ಪಿ, ಹಣಮಂತ್ರಾಯಗೌಡ ಹಣಮರೆಡ್ಡಿ ಕುಪ್ಪಿ, ಅಮಲಪ್ಪ ಹಳ್ಳಿ ಇತರರಿದ್ದರು.
ಮೇಲಪ್ಪ ಗುಳಗಿ ವಂದಿಸಿದರು. ಆನಂದ ಬಾರಿಗಿಡದ ಸ್ವಾಗತಿಸಿ, ನಿರೂಪಿಸಿದರು.