

ಮಸ್ಕಿ: ಸ್ವಾತಂತ್ರೃ ದಿನಾಚರಣೆ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಭಾನುವಾರ ಪಟ್ಟಣದಲ್ಲಿ ಬೈಕ್ ರ‌್ಯಾಲಿ ನಡೆಸಿದರು.
ಬೈಕ್ ರ‌್ಯಾಲಿಗೆ ಚಾಲನೆ ನೀಡಿದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ಸ್ವಾತಂತ್ರೃ ಚಳವಳಿ ಕುರಿತು ಮನೆ ಮನೆಗೆ ಮುಟ್ಟಬೇಕಾದರೆ ಪ್ರತಿ ಮನೆ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಾಡಬೇಕು ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಶರಣಯ್ಯ ಸೊಪ್ಪಿಮಠ ಮಾತನಾಡಿದರು. ಯುವ ಮೋರ್ಚಾ ಅಧ್ಯಕ್ಷ ಶರಣಗೌಡ ತಿಡಿಗೋಳ, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಮರೇಶ ರೈತ ನಗರ ಕ್ಯಾಂಪ್, ಪ್ರಸನ್ನ ಪಾಟೀಲ್, ಬಸವರಾಜ ಸ್ವಾಮಿ ಹಸಮಕಲ್, ಚನ್ನಬಸವ ದೇಸಾಯಿ, ರಮೇಶ ಉದ್ಬಾಳ, ಬಸವರಾಜ ಗುಡಿಹಾಳ, ಅಮರೇಶ ಗೌಡನಬಾವಿ, ಅಜ್ಮೀರ್ ಮಸ್ಕಿ, ಮೌನೇಶ ನಾಯಕ, ಗಂಗಾಧರ ಕಂಬಾಳಿಮಠ, ಮಲ್ಲಿಕಾರ್ಜುನ ಕಂಬಾಳಿಮಠ, ಪುರಸಭೆ ಸದಸ್ಯರಾದ ಸುರೇಶ ಹರಸೂರು, ಚೇತನ ಪಾಟೀಲ್, ಭರತ್ ಕುಮಾರ, ಬಸವರಾಜ ಬುಕ್ಕಣ್ಣನವರ್, ಸಂತೋಷ ಬಳಿಗಾರ, ಗದ್ದಪ್ಪ ಮಡಿವಾಳ, ಶಾಮೀದ್ ಸಾಬ್, ರಾಮಚಂದ್ರ ತುರ್ವಿಹಾಳ ಇತರರಿದ್ದರು.