

ಕಲಬುರಗಿ: ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಗುರಿ ಹೊಂದಿದ್ದು, ಬಾಕಿ ಉಳಿದಿರುವ ಒಂಬತ್ತು ಜಿಲ್ಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಮೂರು ಜಿಲ್ಲೆಗೆ ಮೆಡಿಕಲ್ ಕಾಲೇಜು ಘೋಷಿಸಿದ್ದು, ನಂತರ ಎಲ್ಲೆಡೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದ ಗುಲ್ರ‍್ಗ ವೈದ್ಯಕಿಯ ವಿಜ್ಞಾನ ಸಂಸ್ಥೆಯ ಕಾಲೇಜು ಆವರಣದಲ್ಲಿ ಬುಧವಾರ ರ‍್ಪಡಿಸಿದ್ದ ಜಿಮ್ಸ್ ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕಿದ್ವಾಯಿಯಲ್ಲಿ ಬ್ರಾಕಿಥೆರಪಿ ವಿಕೀರಣ ಚಿಕಿತ್ಸೆ ಟಕದ ಲೋಕರ‍್ಪಣೆ ಸೇರಿ ೬೫೦ ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗೆ ಚಾಲನೆ, ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿ, ಪ್ರತಿ ಜಿಲ್ಲೆಗೆ ಮೆಡಿಕಲ್ ಕಾಲೇಜು, ಟ್ರಾಮಾ ಕೇರ್ ಸೆಂಟರ್, ಕ್ಯಾನ್ಸರ್ ಆಸ್ಪತ್ರೆ ಇರುವ ಗುರಿ ಹೊಂದಿದ್ದು, ಬಡವರಿಗೆ ಗುಣಮಟ್ಟದ ಆರೋಗ್ಯ ಚಿಕಿತ್ಸೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರಸಕ್ತ ರ‍್ಷ ಬಾಗಲಕೋಟೆ, ಮಂಗಳೂರು, ಕೋಲಾರದಲ್ಲಿ ಹೊಸ ಮೆಡಿಕಲ್ ಕಾಲೇಜು ಘೋಷಿಸಲಾಗಿದೆ. ಬರೀ ಮೈಸೂರು, ಬೆಂಗಳೂರು, ಹುಬ್ಬಳ್ಳಿ, ಧಾರವಾಡಕ್ಕೆ ಆರೋಗ್ಯ ಸೀಮಿತ ಆಗಬಾರದು. ಬಡತನದ ಜನರಿಗೆ ಗುಣಮಟ್ಟದ, ಕಡಿಮೆ ದರದಲ್ಲಿ ಆರೋಗ್ಯ ಸೇವೆ ಒದಗಿಸಬೇಕು. ರ‍್ಕಾರಿ ಆಸ್ಪತ್ರೆಗೆ ಬರುವವರು ಬಡವರು, ಗ್ರಾಮೀಣರು ಎಂದು ಹೇಳಿದರು.
ರಾಜ್ಯಸಭೆ ಪ್ರತಿ ಪ ನಾಯಕ ಡಾ.ಮಲ್ಲಿಕರ‍್ಜುನ ರ‍್ಖಗೆ ಮಾತನಾಡಿ, ರ‍್ಕಾರಿ ಕರ‍್ಯಕ್ರಮದಲ್ಲಿ ರಾಜಕಾರಣ ಮಾತಾಡೋದು ಬೇಡ ಎನ್ನುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹರಿಯಾಣದ ರ‍್ಕಾರಿ ಕರ‍್ಯಕ್ರಮದಲ್ಲಿ ಕಾಂಗ್ರೆಸ್ ಪದ ವಿರುದ್ಧ, ಸೋನಿಯಾ, ರಾಹುಲ್ ಗಾಂಧಿ ಬಗ್ಗೆ ಮಾತಾಡಿದ್ದಾರೆ. ಎಲ್ಲದ್ದಕ್ಕೂ ಗಾಂಧಿ ಕುಟುಂಬವೆನ್ನುತ್ತಾರೆ ಎಂದು ಹೇಳಿದರು.
ರಾಹುಲ್ ಗಾಂಧಿ ಅಜ್ಜಿ, ಅಪ್ಪ ದೇಶಕ್ಕಾಗಿ ಪ್ರರ‍್ಣಾರ‍್ಪಣೆ ಮಾಡಿದ್ದಾರೆ. ನೆಹರು ದೇಶಕ್ಕಾಗಿ ಒಂಬತ್ತು ರ‍್ಷ ಜೈಲಿಗೆ ಹೋಗಿದ್ದರು. ನಿಮ್ಮಲ್ಲಿ (ಬಿಜೆಪಿ) ಯಾರಾದರೂ ಹೋಗಿದ್ದಾರಾ ತಿಳಿಸಿ? ನೆಹರು ದೇಶಕ್ಕೆ ದೊಡ್ಡ ದೊಡ್ಡ ಯೋಜನೆ ಮಾಡಿದ್ದರು. ಆದರೆ ಮೋದಿ ೨ ಕೋಟಿ ಉದ್ಯೋಗ, ೧೫ ಲ ರೂ. ನೀಡ್ತೇವೆ, ಎಂಎಸ್ಪಿ ಹೆಚ್ಚಿಸುತ್ತೇವೆ ಎಂದು ಮೌನ ವಹಿಸಿದ್ದಾರೆ. ಸುಳ್ಳು ಹೇಳುವುದರಲ್ಲಿ ನಿಸ್ಸಿಮರಾಗಿದ್ದಾರೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಾತನಾಡಿ, ರಾಜ್ಯ ರ‍್ಕಾರವೂ ಕಲ್ಯಾಣ ರ‍್ನಾಟಕ ಭಾಗದಲ್ಲಿ ಅತ್ಯುತ್ತಮ ಆಸ್ಪತ್ರೆ ನರ‍್ಮಿಸುವ ಜತೆಗೆ ಅಭಿವೃದ್ಧಿ ಮಾಡಿ ಋಣ ತೀರಿಸುತ್ತಿದೆ. ಶರಣಪ್ರಕಾಶ ಪಾಟೀಲ್ ಎಲ್ಲ ಕಲಬುರಗಿಗೆ ರ‍್ತಾ ಇದ್ದಾರೆ. ನನ್ನ ೇತ್ರದಲ್ಲೇ ಯಡಿಯೂರಪ್ಪ ವೈದ್ಯಕಿಯ ಕಾಲೇಜು ಕೊಟ್ಟು, ಕಿತ್ತುಕೊಂಡರು. ಸಿದ್ದರಾಮಯ್ಯ ಬಜೆಟ್ನಲ್ಲಿ ಸೇರಿಸಿದ್ದಾರೆ ಎಂದರು.
ಮಾತು ಕೊಟ್ಟಂತೆ ನಾವು ಉಳಿಸಿಕೊಳ್ಳುತ್ತಿದ್ದೇವೆ. ಕಲ್ಯಾಣ ರ‍್ನಾಟಕದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಮಲ್ಲಿಕರ‍್ಜುನ ರ‍್ಖಗೆ ನೇತೃತ್ವದಲ್ಲಿ ಶರಣಪ್ರಕಾಶ ಪಾಟೀಲ್, ಪ್ರಿಯಾಂಕ್ ರ‍್ಖಗೆ ಸೇರಿ ಎಲ್ಲರೂ ಋಣ ತೀರಿಸಿ, ಸಂದೇಶ ರವಾನಿಸಿದ್ದಾರೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ರ‍್ಗದ ಜನ ಅಧಿಕಾರಕ್ಕೆ ಬಂದಂತೆ. ನಮ್ಮ ರ‍್ಕಾರ ಯುವಕರು, ಮಹಿಳೆಯರು, ರೈತರು, ಕರ‍್ಮಿಕರು ಸೇರಿ ಎಲ್ಲ ರ‍್ಗದ ಜನರಿಗೆ ಕರ‍್ಯಕ್ರಮ ನೀಡಿ ರಸಲಾಗುತ್ತಿದೆ ಎಂದು ಹೇಳಿದರು.
ಅಲ್ಲಮಪ್ರಭು ಪಾಟೀಲ್ ಅಧ್ಯತೆ ವಹಿಸಿದ್ದರು. ಸಚಿವರಾದ ಪ್ರಿಯಾಂಕ್ ರ‍್ಖಗೆ, ಉನ್ನತ ಶಿಣ ಸಚಿವ ಡಾ.ಎಂ.ಸಿ.ಸುಧಾಕರ್, ಸಾರಿಗೆ ಸಚಿವ ರಾಮಲಿಂಗಾರಡ್ಡಿ, ಕಲ್ಯಾಣ ರ‍್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯ ಡಾ.ಅಜಯಸಿಂಗ್, ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯ ಬಿ.ಆರ್.ಪಾಟೀಲ್, ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಎಂ.ವೈ.ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಚಂದ್ರಶೇಖರ ಪಾಟೀಲ್, ಕನೀಜ್ ಾತಿಮಾ, ಕೂಡಾ ಅಧ್ಯ ಮಜರ್ ಆಲಂ ಖಾನ್, ಡಿಸಿ ೌಜಿಯಾ ತರನ್ನುಮ್, ಕಮೀಷನರ್ ಡಾ.ಶರಣಪ್ಪ ಎಸ್.ಡಿ., ಎಸ್ಪಿ ಅಡ್ಡೂರು ಶ್ರೀನಿವಾಸುಲು, ಜಿಮ್ಸ್ ನರ‍್ದೇಶಕ ಡಾ.ಉಮೇಶ ಇತರರಿದ್ದರು.