

ಮಾಂಜರಿ: ಶೋಷಿತರು ಹೋರಾಟ ಮಾಡುವ ಮೂಲಕ ಸರ್ಕಾರದ ಯೋಜನೆ ಪಡೆದುಕೊಳ್ಳಲು ಮುಂದಾಗಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಹೇಳಿದರು.
ಸಿದ್ದಾಪುರವಾಡಿ ಗ್ರಾಮದಲ್ಲಿ ಭೀಮ ಘರ್ಜನೆ ಯುವರಾಜ ಬಣ ಸಂಘಟನೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ದಲಿತ ಹಿಂದುಳಿದ ವರ್ಗಗಳ ಅಲ್ಪ ಸಂಖ್ಯಾತರ ಜಾಗೃತಿ ಸಲಹಾ ಸಮಿತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಹಿಳಾ ಗ್ರಾಮ ಸಭೆಯನ್ನು ಪ್ರತಿಯೊಂದು ಗ್ರಾಮದಲ್ಲಿ ನಡೆಸಬೇಕು. ಕಾವಲು ಸಮಿತಿಯವರು ಮೂರು ತಿಂಗಳಿಗೊಮ್ಮೆ ಸಭೆ ಮಾಡಬೇಕು. ಅಧಿಕಾರಿಗಳು ಜನರಲ್ಲಿ ಅರಿವು ಮೂಡಿಸುವುದರಿಂದ ದೌರ್ಜನ್ಯ ತಡೆಯಲು ಸಾಧ್ಯ ಎಂದರು.
ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ, ತಹಸೀಲ್ದಾರ್ ಸಿ.ಎಸ್.ಕುಲಕರ್ಣಿ, ಶಿವಾನಂದ ಶಿರಗಾಂವಿ, ಭೀಮ ಘರ್ಜನೆ ಯುವರಾಜ ಬಣದ ರಾಜ್ಯಾಧ್ಯಕ್ಷ ಯುವರಾಜ ಕಾಂಬಳೆ, ಮಚೇಂದ್ರ ಕಾಡಾಪುರ ಇತರರಿದ್ದರು. ಮಹಾದೇವ ಕೋಳಿ ಸ್ವಾಗತಿಸಿದರು. ಭರತ ಕಲಾಚಂದ್ರ ನಿರೂಪಿಸಿದರು.