ಪ್ರತಿ ಗ್ರಾಮಕ್ಕೆ ಕುಡಿಯುವ ನೀರು

1711Klb07
Published on

ಆಳಂದ: ತಾಲೂಕಿನ ಎಲ್ಲ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಸರ್ಕಾರದಿಂದ ಅನುಮೋದನೆ ಸಿಗುವ ನಿರೀಕ್ಷೆಯಿದೆ ಎಂದು ಶಾಸಕ ಸುಭಾಷ್ ಗುತ್ತೇದಾರ ಹೇಳಿದರು.
ಪಟ್ಟಣದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಪುರಸಭೆಯಿಂದ ಮಂಗಳವಾರ ಆಯೋಜಿಸಿದ್ದ ನಗರೋತ್ಥಾನ ಹಂತ 3ನೇ ಯೋಜನೆಯಡಿ 637.50 ಲಕ್ಷ.ರೂ.ವೆಚ್ಚದಲ್ಲಿ ನೀರು ಸರಬರಾಜು ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
ಪಟ್ಟಣಕ್ಕೆ ಸಧ್ಯ ಕುಡಿಯುವ ನೀರಿನ ಸಮಸ್ಯೆಯಿದ್ದು ಮುಂದಿನ ದಿನಗಳಲ್ಲಿ ಆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಯೋಜನೆಯಿಂದ ಪಟ್ಟಣಕ್ಕೆ ಶುದ್ಧ ಕುಡಿವ ನೀರು ದೊರಕಲಿದೆ. ಈ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸಲಾಗಿದ್ದು ಅದರಲ್ಲಿ ಟ್ಯಾಂಕ್ನ ಸಾಮಥ್ರ್ಯ ಹೆಚ್ಚಳ, ಶುದ್ಧ ಕುಡಿವ ನೀರಿನ ಘಟಕ ಸೇರಿವೆ ಎಂದರು.
ಪಟ್ಟಣಕ್ಕೆ ಎರಡು ನೀರಿನ ಟ್ಯಾಂಕ್ಗಳ ಅವಶ್ಯಕತೆಯಿದ್ದು, ನಂತರದ ದಿನಗಳಲ್ಲಿ ಇನ್ನೊಂದು ಟ್ಯಾಂಕ್ ನಿಮರ್ಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಕೊರಳ್ಳಿ ಹತ್ತಿರ ಇರುವ ಸರ್ಕಾರದ 70 ಏಕರೆ ಗೋಮಾಳ ಜಮೀನಿನಲ್ಲಿ ಬೃಂದಾವನದ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದು ಕೂಡ ಸಾಕಾರವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಪುರಸಭೆ ಅಧ್ಯಕ್ಷೆ ರಾಜಶ್ರೀ ಖಜೂರಿ, ಉಪಾಧ್ಯಕ್ಷ ಈರಣ್ಣ ಹತ್ತರಕಿ, ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ, ಮುಖ್ಯ ಅಭಿಯಂತರ ದಿನೇಶ, ಕಾರ್ಯಪಾಲಕ ಅಭಿಯಂತರ ಬಸವರಾಜ ಆಲೇಗಾಂವ, ಪುರಸಭೆ ಮುಖ್ಯಾಧಿಕಾರಿ ಬಾಬುರಾವ ವಿಭೂತೆ, ಅಧಿಕಾರಿ ವಿಜಯಕುಮಾರ ಬಿಲಗುಂದಿ, ಪುರಸಭೆ ಸದಸ್ಯರಾದ ಪ್ರತಿಭಾ ಘನಾತೆ, ಶ್ರೀಶೈಲ್ ಪಾಟೀಲ್, ಮೃತ್ಯುಂಜಯ ಆಲೂರೆ, ಕವಿತಾ, ಹುಸೇನಖಾನ್, ಅಸ್ಮಿತಾ ಚಿಟಗುಪ್ಪಕರ್, ನಾಮ ನಿದರ್ೇಶಿತ ಸದಸ್ಯರಾದ ಯೂಸುಫ್ ಅನ್ಸಾರಿ, ಶ್ರೀಧರ ಸಾಲೇಗಾಂವ, ಸುಭಾಷ್ ಬೆಲಸೂರೆ, ನಿಂಗಮ್ಮ ಸೂರ್ಯಕಾಂತ, ರಮೇಶ ಸಂಗಾ, ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ್ ಪಾಟೀಲ್, ಇತರರು ಪಾಲ್ಗೊಂಡಿದ್ದರು.
ಕಾಂಚನಾ ಸ್ವಾಗತಿಸಿದರು. ಶ್ರೀಶೈಲ ಮಾಳಗೆ ನಿರೂಪಣೆ ಮಾಡಿದರು. ಆಫ್ರೀನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net