ಪ್ರತಿ ಗ್ರಾಪಂನಿಂದ ಮೃತ್ತಿಕೆ ಸಂಗ್ರಹ

03
Published on

ಹುಣಸಗಿ : ದೇಶದ ಹುತಾತ್ಮ ಯೋಧರನ್ನು ಪ್ರತಿಯೊಬ್ಬರೂ ಗೌರವಿಸುವ ನಿಟ್ಟಿಯಲ್ಲಿ ನಮ್ಮ ದೇಶ ನಮ್ಮ ಮಣ್ಣಿನ ಅಭಿಯಾನ ನೆರವಾಗಲಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜಯ್ಯ ಸ್ವಾಮಿ ಹಿರೇಮಠ ಹೇಳಿದರು.

ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡ ಅಮೃತ ಕಲಶ, ಕೌಶಲ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ತಾಲೂಕಿನ ಪ್ರತಿ ಗ್ರಾಪಂನಿAದ ಸಂಗ್ರಹಿಸಿದ ಮೃತ್ತಿಕೆಯ(ಮಣ್ಣು)ನ್ನು ನೆಹರು ಯುವ ಕೇಂದ್ರದ ಮೂಲಕ ಜಿಲ್ಲಾ ಕೇಂದ್ರಕ್ಕೆ ಕಳುಹಿಸಲಾವುದು. ಅಲ್ಲಿಂದ ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮ ಸೈನಿಕರ ಸ್ಮರಣಾರ್ಥ ದೆಹಲಿಯ ಅಮೃತವಾಟಿಕಾ ಸ್ಥಳದಲ್ಲಿ ಉದ್ಯಾನ ನಿರ್ಮಿಸಲು ಕಳುಹಿಸಲಾಗುವುದು ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ಮಾತನಾಡಿ, ದೇಶದ ವಿಷಯ ಬಂದಾಗ ನಾವೆಲ್ಲರೂ ಒಂದೇ ಎಂಬ ಭಾವನೆ ಎಲ್ಲರಲ್ಲಿ ಬಂದಾಗ ದೇಶ ಭಕ್ತಿ ತಾನಾಗಿಯೇ ಜಾಗೃತವಾಗುತ್ತದೆ ಎಂದರು. ಪ್ರತಿ ಗ್ರಾಪಂನಿAದ ತರಲಾಗಿದ್ದ ಮೃತ್ತಿಕೆಯ(ಮಣ್ಣು) ಕಲಶವನ್ನು ಬಸವೇಶ್ವರ ವೃತ್ತದಿಂದ ತಾಪಂ ಕಚೇರಿವರೆಗೆ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಯಿತು.

ಮುಖಂಡರಾದ ಚನ್ನಯ್ಯ ಸ್ವಾಮಿ ಹಿರೇಮಠ, ಬಸವರಾಜ ಸಜ್ಜನ್, ಆರ್.ಎಂ.ರೇವಡಿ, ಮಂಜು ಬಳಿ, ರವಿ ಮಲಗಲದಿನ್ನಿ, ಅಪ್ಪಣ್ಣ ಗೋಗಿ, ರಮೇಶ ವಾಲಿ, ಬಸವರಾಜ ಪಟಶೆಟ್ಟಿ, ರಾಜು ದೇಸಾಯಿ, ನಿವೃತ್ತ ಸೈನಿಕರಾದ ಬಾಲಪ್ಪ ಕಟ್ಟಿಮನಿ, ಗುಂಡೇರಾವ ಪವಾರ್, ಸುರೇಶ ಪವಾರ್ ಇತರರಿದ್ದರು.
ಬೂದೆಪ್ಪ ಪವಾರ್ ವಂದಿಸಿದರು. ಸೋಮಶೇಖರ ಶಿವಶಿಂಪಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net