

ಕೋಲಾರ : ವಿದ್ಯಾರ್ಥಿಗಳಲ್ಲಿ ದೇಶ ಭಕ್ತಿ, ದೇಶಪ್ರೇಮ ಹಾಗೂ ರಾಷ್ಟ್ರಧ್ವಜ, ರಾಷ್ಟ್ರಗೀತೆಯ ಬಗ್ಗೆ ಗೌರವ ಮೂಡಿಸುವ ಸಲುವಾಗಿ ಪ್ರತಿ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ ಸೇವಾದಳ ಘಟಕವನ್ನು ಆರಂಭಿಸುವುದು ಅಗತ್ಯ ಎಂದು ಪದವಿ ಪೂರ್ವ ಶಿಕ್ಷಣ ಉಪನಿರ್ದೇಶಕ ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ನಗರದ ಬಾಲಕಿಯರ ಜೂನಿಯರ್ ಕಾಲೇಜಿನಲ್ಲಿ ಶುಕ್ರವಾರ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಭಾರತಸೇವಾದಳ ಜಿಲ್ಲಾ ಸಮಿತಿ ಆಯೋಜಿಸಲಾಗಿದ್ದ ಪದವಿಪೂರ್ವ ಉಪನ್ಯಾಸಕರ ಪುನಶ್ಚೇತನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಇಲಾಖೆಯ ಹಿರಿಯ ಅಧಿಕಾರಿಗಳು ಈ ಕುರಿತಂತೆ ಈಗಾಗಲೇ ಸೂಚನೆ ನೀಡಿದ್ದುö, ಈ ಹಿನ್ನೆಲೆಯಲ್ಲಿ ಪದವಿಪೂರ್ವ ಹಂತದ ಉಪನ್ಯಾಸಕರಿಗೆ ಪುನಶ್ಚೇತನ ಕಾರ್ಯಾಗಾರ ಆಯೋಜಿಸಲಾಗಿದೆ. ಕಾರ್ಯಾಗಾರಕ್ಕೆ ೧೨೦ ಪದವಿ ಪೂರ್ವ ಕಾಲೇಜಿನಿಂದಲೂ ಪ್ರತಿನಿಧಿಗಳು ಆಗಮಿಸಬೇಕಾಗಿತ್ತುö, ಕಾರ್ಯಾಗಾರಕ್ಕೆ ಬಾರದ ಕಾಲೇಜುಗಳಿಗೆ ಶೋಕಾಸ್ ನೋಟೀಸ್ ನೀಡಿ ಕಾರಣ ಕೇಳಲಾಗುವುದು ಮತ್ತು ಇಲಾಖೆ ವತಿಯಿಂದ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರು ಇಲ್ಲದ ಕಾರಣ ಭಾರತಸೇವಾದಳ ಪುನಶ್ಚೇತನ ಕಾರ್ಯಾಗಾರಗಳಲ್ಲಿ ಭಾಗವಹಿಸಿ ರಾಷ್ಟ್ರಧ್ವಜ ಕಟ್ಟುವ, ಹಾರಿಸುವ, ಇಳಿಸುವ ಕುರಿತಂತೆ ಮಾಹಿತಿ ಪಡೆಯುವುದು ಕಾರ್ಯಾಗಾರದ ಉದ್ದೇಶವಾಗಿದೆಯೆಂದರು.
ಸೇವಾದಳ ಜಿಲ್ಲಾ ಗೌರವಾಧ್ಯಕ್ಷ ಸಿಎಂಆರ್ ಶ್ರೀನಾಥ್ ಮಾತನಾಡಿ, ರಾಷ್ಟ್ರಧ್ವಜ ಕುರಿತಂತೆ ಮಾಹಿತಿ ಹೊಂದುವುದು ಪ್ರತಿ ಭಾರತೀಯರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಸೇವಾದಳದ ಕಾರ್ಯಾಗಾರ ಸಹಕಾರಿ. ಇದರ ಪ್ರಯೋಜನ ಪಡೆದುಕೊಳ್ಳಬೇಕು. ಸ್ವಾತಂತ್ರೊ÷್ಯÃತ್ಸವದ ಒಳಗಾಗಿ ಪ್ರತಿ ಪದವಿಪೂರ್ವ ಕಾಲೇಜಿಗೆ ರಾಷ್ಟ್ರಧ್ವಜ ಕುರಿತಂತೆ ಸೇವದಾಳ ಪ್ರಕಟಿಸಿರುವ ಪುಸ್ತಕವನ್ನು ವಿತರಿಸಲಾಗುವುದು ಎಂದು ಅವರು ಘೋಷಿಸಿದರು.
ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ನಾಗಾನಂದ ಕೆಂಪರಾಜ್ ಮಾತನಾಡಿ, ಭಾರತ ಸೇವಾದಳವು ಶಾಲಾ ಕಾಲೇಜು ಮಕ್ಕಳಲ್ಲಿ ಶಿಸ್ತುö, ಸಮಯಪ್ರe್ಞೆ, ಸೇವಾ ಮನೋಭಾವ, ಸೌಹಾರ್ದತೆ, ಸಮನ್ವಯತೆ, ಸಮಾನತೆ ಮೂಡಿಸಲು ಶ್ರಮಿಸುತ್ತಿದೆ. ಪಿಯು ಹಂತದ ಉಪನ್ಯಾಸಕರಿಗೆ ಕಾರ್ಯಾಗಾರ ಏರ್ಪಡಿಸಿರುವುದು ಪ್ರಯೋಜನಕಾರಿಯಾಗಿದೆ ಎಂದರು.
ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ರಾಷ್ಟ್ರಧ್ವಜವನ್ನು ಹಾರಿಸುವಾಗ ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕೆವಹಿಸಬೇಕು ಎಂದರು.
ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್, ರಾಷ್ಟ್ರಧ್ವಜ ಕಟ್ಟುವ ಹಾಗೂ ಮಡಚುವ ಮತ್ತು ಹಾರಿಸುವ ವಿಧಾನಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಬಾಲಕಿಯರ ಜೂನಿಯರ್ ಕಾಲೇಜು ಪ್ರಾಂಶುಪಾಲ ಬಾಲಕೃಷ್ಣ ಹಾಜರಿದ್ದರು.