ಪ್ರತಿ ಆ್ಯಪ್ ನಲ್ಲೂ ಕನ್ನಡ ಬಳಕೆ

nagbharan sanman
Published on

ಬೀದರ್: ಹಲವು ತಂತ್ರಜ್ಞಾನ ಮತ್ತು ತಂತ್ರಾಂಶಗಳಲ್ಲಿ ಈಗಾಗಲೇ ಕನ್ನಡ ಅಳವಡಿಸಲಾಗಿದೆ. ನಾವು ಬಳಸುವ ವಿವಿಧ ಆ್ಯಪ್ ಗಳಲ್ಲಿ ಇನ್ಮುಂದೆ ಕನ್ನಡ ಅಳವಡಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದರು.

ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಹಾಗೂ ಜಾನಪದ ಕಲಾವಿದರ ಬಳಗದಿಂದ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಆಧುನಿಕ ಯುಗಕ್ಕೆ ತಕ್ಕಂತೆ ಕನ್ನಡ ಬಳಕೆ ಮಾಡಬೇಕಾಗಿದೆ. ಎಲ್ಲ ತಂತ್ರಜ್ಞಾನದಲ್ಲಿ ಕನ್ನಡ ಬಳಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಪ್ರತಿಯೊಬ್ಬ ಕನ್ನಡಿಗನೂ ಕನ್ನಡ ಪಡೆಯ ಸದಸ್ಯನಾಗಿ ಮಾತೃಭಾಷೆ ಕಾಯಕ ಮಾಡಲು ಮುಂದಾಗಬೇಕು. ಕನ್ನಡದ ಕೆಲಸ ಎಂದರೆ ಅದು ನಮ್ಮ ಮನೆಯ ಕೆಲಸ ಎಂಬ ಭಾವನೆ ಎಲ್ಲರಲ್ಲಿ ಮೂಡಿಸಬೇಕಿದೆ. ಎಲ್ಲ ಕಡೆ ಕನ್ನಡದ ಬಳಕೆ ಅನುಷ್ಠಾನಕ್ಕೆ ತರಬೇಕಾದರೆ ನಮಗೆ ಎದುರಾಗುವ ಸಮಸ್ಯೆಗಳು ಯಾವ್ಯಾವವು ಎಂಬುದನ್ನು ಪಟ್ಟಿ ಮಾಡಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.

ಜಿಲ್ಲಾ ಜನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷೆ ಪಾರ್ವತಿ ಸೋನಾರೆ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಪ್ರಮುಖರಾದ ಜೆ.ಎನ್. ಡಫಳಾಪುರ, ಶ್ರೀಮಂತ ಸಪಾಟೆ, ರವಿ ನೇಳಗೆ, ಮಹೇಶ ಹಳೆಂಬುರೆ, ಚಂದ್ರಾವತಿ ಘಂಟೆ, ಖುಷಿ ಇದ್ದರು. ಎಂ.ಪಿ. ಮುದಾಳೆ ಸ್ವಾಗತಿಸಿದರು. ಚಂದ್ರಕಾಂತ ಹಳೆಂಬುರೆ ನಿರೂಪಣೆ ಮಾಡಿದರು. ಸುನೀಲ ಭಾವಿಕಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net