

ಕಲಬುರಗಿ: ಹಾಸನ ಸಂಸದ ಪ್ರಜ್ವಲ ರೇವಣ್ಣ ಪೆನ್‌ಡ್ರೆÊವ್ ಪ್ರಕರಣದಿಂದ ಸಾವಿರಾರ ಮಹಿಳೆಯರ ಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಅವರನ್ನು ಬಂಧಿಸಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಎಂ) ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಆಗ್ರಹಿಸಿದರು. ಅಧಿಕಾರ, ಸಂಪತ್ತಿನ ಬಲದಿಂದ ಸಾವಿರಾರು ಮಹಿಳೆಯರನ್ನು ಅಸಹಾಯಕತೆಗೆ ದೂಡಿ ಅವರನ್ನು ಬಳಸಿ, ಘನತೆಯ ಬದುಕಿಗೆ ಧಕ್ಕೆ ತರಲಾಗಿದೆ. ಇಂತಹ ಸಂದರ್ಭದಲ್ಲೂ ಕೆಲವರು ರಾಜಕೀಯ ಅಪ್ರಬುದ್ಧತೆಯಿಂದ ಮಾತನಾಡುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಹಾಸನದಲ್ಲಿ ಪಾಳೆಗಾರಿಕೆ ರಾಜಕೀಯ, ಮಹಿಳೆಯರ ಘನತೆಯ ಬದುಕಿಗೆ ಆಗ್ರಹಿಸಿ ಮೇ ೩೦ರಂದು ಹಾಸನ ಚಲೋ ಹಮ್ಮಿಕೊಳ್ಳಳಾಗಿದೆ. ರಾಜ್ಯದ ೭೨ ಜನಪರ ಸಂಘಟನೆಗಳು ಕೂಡಿಕೊಂಡು ಹಾಸನ ಚಲೋ ಹಮ್ಮಿಕೊಳ್ಳಲಾಗಿದೆ. ಮಹಿಳೆಯರ ಘನತೆಯ ಬದುಕಿಗೆ ಚ್ಯುತಿ ತರುವ ಕೆಲಸಗಳು ನಿಲ್ಲಿಸಬೇಕು, ಪ್ರಜ್ವಲ್‌ನನ್ನು ಬಂಧಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ವಿಫಲವಾಗಿವೆ. ಕೂಡಲೇ ಕ್ರಮ ಕೈಗೊಳ್ಳಬೇಕು. ಬಿಜೆಪಿಯವರು ಈ ಬಗ್ಗೆ ಬಾಯಿ ಬಿಡಬೇಕು ಎಂದು ಹೇಳಿದರು.