

ಚಿತ್ರದುರ್ಗ: ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯಲ್ಲಿ ಕಲ್ಪಿತ ಸಂಸತ್ ಚುನಾವಣೆ ನಡೆಯಿತು. 4 ಸ್ಥಾನಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸಾ ರ್ವತ್ರಿಕ ಚುನಾವಣೆ ಮಾದರಿ ಮತದಾನ ನಡೆಯಿತು.
ಚುನಾವಣಾ ವೇಳಾಪಟ್ಟಿಯಂತೆ 4 ಪ್ರತಿನಿಧಿ ಸ್ಥಾನಗಳಿಗೆ 16 ನಾಮಪತ್ರಗಳು ಸಲ್ಲಿಕೆಯಾಗಿದ್ದವು.ನಾಮಪತ್ರ ಸಲ್ಲಿಕೆಗೆ ಗಡುವು,ಹಿಂಪಡೆ ಯುವಿಕೆಗೆ ಅವಕಾಶ ಹಾಗೂ ಮತದಾನದ ಬಳಿಕ ಫಲಿತಾಂಶ ಘೋಷಿಸಿ,ಮಂತ್ರಿಮಂಡಲ ರಚಿಸಲಾಯಿತು. ಎಸ್‌ಆರ್‌ಎಸ್ ಶಿಕ್ಷಣ ಸ ಮೂಹ ಸಂಸ್ಧೆ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮತ ಹಾಕುವ ಮೂಲಕ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂಥ ಕಾರ‌್ಯಕ್ರಮಗಳ ಮೂಲಕ ಮಕ್ಕಳಲ್ಲಿ ಪ್ರಜ್ಞಾಪ್ರಭುತ್ವದ ಮೌಲ್ಯಗಳೆಡೆ ಅರಿವು ಮೂಡಿಸಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. ಸಂಸ್ಥೆ ಕಾರ‌್ಯದರ್ಶಿ ಸುಜಾತ ಲಿಂಗಾರೆಡಿ,್ಡಆಡಳಿತ ಮಂಡಳಿ ಸದಸ್ಯರು,ಪ್ರಾಂಶುಪಾಲರಾದ ಎಂ.ಪ್ರಭಾಕರ್,ಎಂ.ಎಸ್. ಅರ್ಪಿತಾ, ಬೋಧಕ,ಬೋಧಕೇತರ ಸಿಬ್ಬಂದಿ ಹಾಗೂ 6 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಮತ ಚಲಾಯಿಸಿದರು.