

ಚಿತ್ರದುರ್ಗ: ಬೂತ್ ಮಟ್ಟದಲ್ಲಿ ಮನೆ ಮನೆಗೆ ಭೇಟಿ ನೀಡಿ ಸದಸ್ಯತ್ವ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಶಾಸಕ ಡಾ.ಎಂ. ಚಂ ದ್ರಪ್ಪ ಪಕ್ಷದ ಕಾರ‌್ಯಕರ್ತರಿಗೆ ಮನವಿ ಮಾಡಿದರು.
ಹೊಳಲ್ಕೆರೆ ಬಿಜೆಪಿ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಸದಸ್ಯತ್ವ ಅಭಿಯಾನ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮುನ್ನೂರು ಸದಸ್ಯರನ್ನು ನೋಂದಾಯಿಸುವ ಕಾರ‌್ಯಕರ್ತರಿಗೆ ಪಕ್ಷದ ಜಿಲ್ಲೆ, ರಾಜ್ಯ, ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವರ ಆಯ್ಕೆಗೆ ಮತದಾನ ಮಾ ಡುವ ಹಕ್ಕು ಸಿಗುತ್ತದೆ ಎಂದರು.
ಸದಸ್ಯತ್ವ ಅಭಿಯಾನಕ್ಕೆ ಅಂತಹ ಶಕ್ತಿಯಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದಸ್ಯತ್ವ ಅಭಿಯಾನ ತುಂಬ ಮುಖ್ಯ. ಪಕ್ಷದ ಕಾರ‌್ಯದಲ್ಲಿ ತೊಡಗಿಸಿಕೊಂಡರೆ ಪಕ್ಷ ಗುರುತಿಸಿ ಅಧಿಕಾರ ನೀಡುತ್ತದೆ. ಚಹಾ ಮಾರುತ್ತಿದ್ದ ನರೇಂದ್ರಮೋದಿ ಅವರು ಪ್ರಧಾನಿಯಾಗಿರುವುದೇ ಇದ ಕ್ಕೆ ಸಾಕ್ಷಿ. ಅಮೆರಿಕ, ರಷ್ಯಾದಂತಹ ಬಲಿಷ್ಠ ರಾಷ್ಟ್ರಗಳ ಅಧ್ಯಕ್ಷರು ಮೋದಿ ಅವರ ಮಾತಿಗೆ ಗೌರವ ಕೊಡುತ್ತಿದ್ದಾರೆ ಎಂದ ಅವರು, ಕ್ಷೇತ್ರದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕೆಲಸಗಳನ್ನು ವಿವರಿಸಿದರು.
ಶಿವಮೊಗ್ಗ ಶಾಸಕ ಚನ್ನಬಸಪ್ಪ ಮಾತನಾಡಿ, ಸಾಮಾನ್ಯ ಸದಸ್ಯ ಸಕ್ರಿಯ ಸದಸ್ಯನಾಗಬೇಕಾದರೆ ಪ್ರತಿ ಮತಗಟ್ಟೆಯಲ್ಲಿ ಮೂವರು ಸದಸ್ಯರನ್ನು ನೊಂದಾಯಿಸಬೇಕು. ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ 65 ಸಾವಿರ ಸದಸ್ಯತ್ವ ನೋಂದಣಿಯಾಗಿದೆ. ನಮ್ಮ ಗುರಿ ಒಂದು ಲಕ್ಷ. ಮೊಬೈಲ್ ಬಳಸಿ ಸದಸ್ಯತ್ವ ನೋಂದಣಿ ಮಾಡಬೇಕಾಗಿರುವುದರಿಂದ, ಮೊಬೈಲ್ ಬಳಕೆ ಸರಿಯಾಗಿರಬೇಕು.
ಅದಕ್ಕಾಗಿ ಯುವಕರನ್ನು ಅಭಿಯಾನದಲ್ಲಿ ತೊಡಗಿಸಿದರೆ ನೋಂದಣಿ ಸುಲಭವಾಗುತ್ತದೆ. ಸದಸ್ಯತ್ವ ಅಭಿಯಾನದಲ್ಲಿ ಹೊಳಲ್ಕೆರೆ ಹೆಸ ರು ಪ್ರಥಮದಲ್ಲಿ ಇರಬೇಕೆಂದಾದರೆ ಸದಸ್ಯತ್ವ ನೋಂದಣಿ ಉತ್ತಮವಾಗಿ ನಡೆಯಬೇಕೆಂದರು.
ಪಕ್ಷದ ರಾಜ್ಯರೈತ ಮೋರ್ಚಾ ಕಾರ‌್ಯದರ್ಶಿ ಮಲ್ಲಿಕಾರ್ಜುನ್, ಮಂಡಲ ಅಧ್ಯಕ್ಷರಾದ ಸಿದ್ದೇಶ್, ಶೈಲೇಶ್, ಪುರಸಭೆ ಸದಸ್ಯ ಆರ್.ಎ.ಅಶೋಕ್, ರೂಪಾ ಸುರೇಶ್, ಡಿ.ಸಿ.ಮೋಹನ್ ಮತ್ತಿತರರು ಇದ್ದರು.