ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟವರು ಬಸವಣ್ಣ

01 06
Published on

ತುಮಕೂರು: ಅನುಭವ ಮಂಟಪದ ಮೂಲಕ ವಿಶ್ವಕ್ಕೆ ಮೊಟ್ಟ ಮೊದಲ ಪ್ರಜಾಪ್ರಭುತ್ವದ ಪರಿಕಲ್ಪನೆ ತಂದುಕೊಟ್ಟು ವಿಶ್ವಗುರುವಾದವರು ಬಸವಣ್ಣ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಬಣ್ಣಿಸಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕದಳಿ ಮಹಿಳಾ ವೇದಿಕೆಯಿಂದ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಗುರು ಬಸವೇಶ್ವರರ ಜಯಂತಿ ಮತ್ತು ಸೇವಾ ದೀಕ್ಷಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, 12ನೇ ಶತಮಾನದಲ್ಲಿ ತಮ್ಮ ಸಮಾಜೋದ್ಧಾರಕ ಚಿಂತನೆಗಳಾದ ಸ್ವಾತಂತ್ರ$್ಯ, ಸಮಾನತೆ, ಕಾಯಕ. ದಾಸೋಹದ ಮೌಲ್ಯಗಳುಳ್ಳ ವಚನಗಳನ್ನು ರಚಿಸಿ ಸಮಾಜಕ್ಕೆ ನೀಡಿದರಲ್ಲದೆ, ಆಚಾರ ವಿಚಾರಗಳನ್ನು ಕಾರ್ಯರೂಪಕ್ಕೆ ತಂದ ಬಸವಣ್ಣ ಬದಲಾವಣೆಯ ಹರಿಕಾರನೆನಿಸಿದರು. ಶರಣರ ವಿಚಾರಧಾರೆಗಳನ್ನು ಅರಿತು ಆತ್ಮಾವಲೋಕನ ಮಾಡಿಕೊಂಡು ಅಳವಡಿಸಿಕೊಳ್ಳಬೇಕು ಎಂದರು.

ಕದಳಿ ವೇದಿಕೆಯ ಕಾರ್ಯ ಚಟುವಟಿಕೆಗಳು ಶ್ಲಾನೀಯ. ವಚನಗಳು ಮಾತೆಯರ ಮೂಲಕ ಮನ ಮನಗಳಲ್ಲಿ, ಮನೆ ಮನೆಗಳಲ್ಲಿ ಮತ್ತು ಮಕ್ಕಳಿಗೆ ತಲುಪುವಲ್ಲಿ ಯಶಸ್ಸು ಕಂಡಿದೆ. ಶರಣರ ವಿಚಾರಧಾರೆಗಳ ಮೂಲಕ ಸಮಾನತೆಯ ಸಮಾಜ ನಿರ್ಮಾಣಕ್ಕೆ ಸಾಧ್ಯವಾಗಿದೆ ಎಂದು ತಿಳಿಸಿದರು.

ಪುರುಷ- ಸ್ತ್ರೀ ಸಮಾನತೆಯ ರೂವಾರಿ ಬಸವಣ್ಣ. ಯಾವುದೇ ಧಾರ್ಮಿಕ ಆಚಾರವನ್ನು ವೈಚಾರಿಕತೆ ನೆಲಗಟ್ಟಿನಲ್ಲಿ ಪರಿಶೀಲಿಸುವ ಪ್ರಯತ್ನವನ್ನು ಬಾಲ್ಯದಲ್ಲಿಯೇ ಕಾಣಬಹುದಾಗಿದೆ. ಗಂಡು-ಹೆಣ್ಣು, ಸ್ಪ-----ೃಶ್ಯ-, ಅಸ್ಪಶ್ಯ ಎಂಬ ಭೇದಭಾವವನ್ನು ತೊಡೆದು ಹಾಕಿದವರು ಬಸವಣ್ಣ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್​ನ ಅಧ್ಯಕ್ಷ ಡಾ.ಸಿ.ಸೋಮಶೇಖರ್​ ಹೇಳಿದರು. ಕದಳಿ ಮಹಿಳಾ ವೇದಿಕೆಯ ರಾಜ್ಯ ಸಂಚಾಲಕಿ ಸುಶೀಲಾ ಸೋಮಶೇಖರ್​ ಮಾತನಾಡಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್​, ಕದಳಿ ವೇದಿಕೆ ಸ್ಥಾಪಕ ಅಧ್ಯೆ ಪ್ರೇಮಾ ಮಲ್ಲಣ್ಣ, ನಗರ ವೀರಶೈವ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಎಸ್​.ಜಿ.ಚಂದ್ರಮೌಳಿ, ಟಿ.ಬಿ.ಶೇಖರ್​, ಕದಳಿ ನಿಕಟ ಪೂರ್ವ ಅಧ್ಯೆ ನಾಗರತ್ನ ಚಂದ್ರಪ್ಪ, ಲೀಲಾವತಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್​ ಅಧ್ಯಕ್ಷ ವಿದ್ವಾನ್​ ಎಂ.ಜಿ, ಸಿದ್ಧರಾಮಯ್ಯ, ನೂತನ ಕದಳಿ ಅಧ್ಯೆ ಶಿವಲಿಂಗಮ್ಮ, ಉಪಾಧ್ಯೆ ಜ್ಯೋತಿ ಆನಂದ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net