

ಸಿರಗುಪ್ಪ: ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಪತ್ರಿಕಾರಂಗ ಪೂರಕವಾಗಿದೆ ಎಂದು ತಾಪಂ ಇಒ ಪವನ್ ಕುಮಾರ್ ಹೇಳಿದರು.
ತೆಕ್ಕಲಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಪತ್ರಿಕಾರಂಗ ಸದೃಢ ದೇಶ ಹಾಗೂ ಪ್ರಜಾಪ್ರಭುತ್ವ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಡಾ.ಮೋಕಾ ಮಲ್ಲಿಕಾರ್ಜುನ ಮಾತನಾಡಿ, ಸಮಾಜದಲ್ಲಿ ಯಾವುದೇ ಘಟನೆಗಳು ನಡೆದಾಗ ಧೈರ್ಯದಿಂದ ಪ್ರಶ್ನೆ ಮಾಡುವ ಹಕ್ಕು ಪತ್ರಕರ್ತರಿಗೆ ಇದ್ದು, ಅದನ್ನು ಉಳಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದರು.
ಪತ್ರಿಕೆಯ ಸಾಧಕ ಬಾಧಕಗಳು ಕುರಿತು ಆರ್.ಬಸವರೆಡ್ಡಿ, ವರದಿಗಾರಿಕೆ ಕುರಿತು ಪಂಪಾಪತಿ ಓತೂರು, ಪತ್ರಿಕಾ ರಂಗದಲ್ಲಿ ಯುವಕರಪಾತ್ರ ಕುರಿತು ಸಿ.ಶಿವರಾಮ, ಸಂಪಾದಕತ್ವ ಕುರಿತು ಯು.ರಮೇಶ ಉಪನ್ಯಾಸ ನೀಡಿದರು. ಕೆ.ಹುಸೇನಿನಾಯಕ ಪತ್ರಿಕೋದ್ಯಮ ಕುರಿತು ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದರು.
ಗ್ರಾಮಾಡಳಿತ ಸಂಘದ ಅಧ್ಯಕ್ಷ ರಾಮಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಟಿ.ಹುಚ್ಚೀರಪ್ಪ, ಕಾರ್ಯದರ್ಶಿ ಚಂದ್ರಕಾಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಗುರಪ್ಪ, ಪಿಎಸ್‌ಐ ಕುಮಾರಸ್ವಾಮಿ, ಪಿಯು ಕಾಲೇಜಿನ ಪ್ರಾಚಾರ್ಯ ನಾಗೇಶ್ವರಾವ್, ಉಪಖಜಾನೆ ಅಧಿಕಾರಿ ಅಲ್ಲಾಭಕ್ಷಿ, ಪತ್ರಕರ್ತ ಚಾಂದ್ ಬಾಷಾ ಇತರರಿದ್ದರು.