ಪ್ರಜಾಪ್ರಭುತ್ವ ದಿನಕ್ಕೆ ಎಲ್ಲರೂ ಸಹಕರಿಸಿ: ತಹಸೀಲ್ದಾರ್ ಸೌಮ್ಯಾ

ಪ್ರಜಾಪ್ರಭುತ್ವ ದಿನಕ್ಕೆ ಎಲ್ಲರೂ ಸಹಕರಿಸಿ: ತಹಸೀಲ್ದಾರ್ ಸೌಮ್ಯಾ
Published on

ಅರಕಲಗೂಡು: ತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲು ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಸಹಕರಿಸಬೇಕು. ಭಾನುವಾರ ಬೆಳಗ್ಗೆ 9.30ಕ್ಕೆ ಸರಿಯಾದ ಸಮಯಕ್ಕೆ ಮಾನವ ಸರಪಳಿ ರಚಿಸಲು ಸಹಕರಿಸುವಂತೆ ತಹಸೀಲ್ದಾರ್ ಸೌಮ್ಯಾ ಮನವಿ ಮಾಡಿದರು.
ತಾಲೂಕು ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಕಡುವಿನ ಹೊಸಹಳ್ಳಿ ಗ್ರಾಮದಿಂದ ಗೊರೂರು ಹೇಮಾವತಿ ಸೇತುವೆಯವರೆಗೆ ಸುಮಾರು 37 ಕಿ.ಲೋ ಮೀಟರ್ ಉದ್ದ, 38 ಸಾವಿರ ಜನರೊಂದಿಗೆ ಮಾನವ ಸರಪಳಿ ನಿರ್ಮಿಸಲಾಗುವುದು. ಸರ್ಕಾರದ ಆದೇಶದಂತೆ ಎಲ್ಲ ಸಮಸ್ತ ಜನತೆ 9.30 ಕ್ಕೆ ಮಾನವ ಸರಪಳಿ ನಿರ್ಮಿಸಿ 9.43ಕ್ಕೆ ನಾಡಗೀತೆ, 9.50ಕ್ಕೆ ಮುಖ್ಯ ಅತಿಥಿಗಳ ಭಾಷಣ, 9.59ಕ್ಕೆ ಭಾಗವಹಿಸಿದ ಎಲ್ಲರೂ ಕೈಯನ್ನು ಮೇಲೆತ್ತಿ ಜಯಘೋಷ ಕೂಗಿ 10 ಗಂಟೆಗೆ ಕಾರ್ಯಕ್ರಮ ಕೊನೆಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಪ್ರತಿ 1 ಕಿಲೋ ಮೀಟರಿಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಉಸ್ತುವಾರಿ ನೀಡಲಾಗಿದೆ. ನಮ್ಮ ಮಾನವ ಸರಪಳಿಗೆ ಹೊಳೆನರಸೀಪುರ ತಾಲೂಕಿನಿಂದ 3 ಸಾವಿರ, ಹಾಗೂ ಸಕಲೇಶಪುರ ತಾಲೂಕಿನಿಂದ 2 ಸಾವಿರ ವಿಧ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net