

ತುಮಕೂರು: ಸಿಪಿಐ(ಎಂ) ಮುಂದಿನ ಮೂರು ವರ್ಷಗಳ ನಡೆ ಕುರಿತು ಚರ್ಚೆ ನಡೆಸಿ, ಸಮಗ್ರ, ಸಮೃದ್ಧ, ಸೌಹಾರ್ದ ಕರ್ನಾಟಕ ಘೋಷ ವಾಕ್ಯದೊಂದಿಗೆ ರಾಜ್ಯದಲ್ಲಿ ಕೋಮು ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ನಡೆಯುವ ಎಲ್ಲ ಹೋರಾಟಗಳಲ್ಲಿ
ಪಕ್ಷ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬುದು ಸೇರಿ 32 ರ್ನಿಣಯಗಳನ್ನು ಕೈಗೊಳ್ಳಲಾಗಿದೆ.
ತುಮಕೂರಿನಲ್ಲಿ ಆಯೋಜಿಸಿದ್ದ ಸಿಪಿಐಎಂ 24ನೇ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜು, ಪ್ರಜಾಪ್ರಭುತ್ವ ಮತ್ತು ಕೋಮು ಸೌಹಾರ್ದ ಉಳಿಸುವ ನಿಟ್ಟಿನಲ್ಲಿ ಮುಂದಿನ ಮೂರು ವರ್ಷ ಪಕ್ಷ ಕೆಲಸ ಮಾಡಲಿದೆ ಎಂದರು.
ಸರ್ವಾಧಿಕಾರ ಮತ್ತು ಕೋಮುವಾದ ಹಿಮ್ಮೆಟ್ಟಿಸಲು, ಪ್ರಜಾಪ್ರಭುತ್ವದ ಸಂರಕ್ಷಣೆಗೆ ಸಿಪಿಐ(ಎಂ) ಕೆಲಸ ಮಾಡಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನವ ಉದಾರೀಕರಣದಿಂದ ಜನರ ಮೇಲಾಗುತ್ತಿರುವ ದಾಳಿಯ ವಿರುದ್ಧ ಪ್ರಬಲವಾದ ಆಂದೋಲನ ಕಟ್ಟುವ ನಿಟ್ಟಿನಲ್ಲಿ ಪಕ್ಷ ಶ್ರಮಿಸಲಿದೆ ಎಂದರು.
ಎನ್ಡಿಎ ಮಿತ್ರ ಪಕ್ಷಗಳನ್ನು ಅಧಿಕಾರದಿಂದ ದೂರ ಇಡಲು ಎಡ ಪಕ್ಷಗಳ ನಡುವೆ ಸಮನ್ವಯ ಸಾಧಿಸುವ ಮೂಲಕ ಪರ್ಯಾಯ ರಾಜಕೀಯ ಶಕ್ತಿ ಹುಟ್ಟು ಹಾಕುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪಕ್ಷ ಕೆಲಸ ಮಾಡಲಿದೆ. ಇದರ ಅಂಗವಾಗಿ ಫೆಬ್ರವರಿ 20ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳ ವಿರುದ್ಧ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲು ತೀಮಾರ್ನಿಸಲಾಗಿದೆ ಎಂದರು.
ತುಮಕೂರು, ಮೈಸೂರು ಮತ್ತು ಕೋಲಾರ ಚಿಕ್ಕಬಳ್ಳಾಪುರದಿಂದ ಏಕ ಕಾಲಕ್ಕೆ ರೈತರು, ಕೂಲಿ ಕಾರ್ಮಿಕರನ್ನು ಒಳಗೊಂಡ ಬೃಹತ್ ಪಾದಯಾತ್ರೆ ಆಯೋಜಿಸಿ, ರೈತ ಸಂಘಟನೆಗಳು ಆಯೋಜಿಸಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ, ಆಂದೋಲನದಲ್ಲಿ ಪಾಲ್ಗೊಳ್ಳಲು
ಸಿಪಿಐ(ಎಂ) ತೀಮಾರ್ನಿಸಿದೆ ಎಂದರು.
ಮುಂಬರುವ ಜನವರಿಯಲ್ಲಿ ಆರ್ಎಸ್ಎಸ್ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಶರಣ ಚಳವಳಿ ಮೇಲೆ ದಾಳಿ ನಡೆಸುವ ನಿಟ್ಟಿನಲ್ಲಿ ಭಾರತೀಯ ಸಂಸತಿ ದರ್ಶನದ ಹೆಸರಿನಲ್ಲಿ ಮಾಡುತ್ತಿರುವ ಸಮಾವೇಶಕ್ಕೆ ಪರ್ಯಾಯವಾಗಿ ಪ್ರಗತಿಪರರು, ಚಿಂತಕರು ಜನವರಿ 3ನೇ ವಾರದಲ್ಲಿ ರೂಪಿಸುವ ಸಮಾವೇಶದಲ್ಲಿ ಸಿಪಿಐ(ಎಂ) ಪಾಲ್ಗೊಳ್ಳಲಿದೆ.
ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಮೀನಾಕ್ಷಿ ಸುಂದರಂ ಮಾತನಾಡಿ, ಸುಮಾರು 50 ವಿವಿಧ ಬೇಡಿಕೆ ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ಬಜೆಟ್ ಅಧಿವೇಶನ ನಡೆಯುವ ಮುನ್ನ 2025ರ ಮಾರ್ಚ್ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ಮುಂದಾಗಿದೆ ಎಂದರು. ಮಹಾತ್ಮಗಾಂಧಿ ಅವರು ಹುತಾತ್ಮರಾದ ದಿನವಾದ ಜನವರಿ 30ರಂದು ಸಮಾನ ಮನಸ್ಕ ಪಕ್ಷಗಳೊಂದಿಗೆ ಸೇರಿ ಪ್ರಜಾಪ್ರಭುತ್ವದ ಉಳಿವಿಗಾಗಿ ಬೃಹತ್ ಮಾನವ ಸರಪಳಿ ನಿರ್ಮಿಸಲು ಸಿಪಿಐ(ಎಂ) ಪಕ್ಷ ಮುಂದಾಗಿದೆ ಎಂದರು. ಸಿಪಿಐ(ಎಂ) ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಸೈಯದ್ ಮುಜೀಬ್,ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಇದ್ದರು.
ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ್: ತುಮಕೂರಿನಲ್ಲಿ ಮೂರು ದಿನ ನಡೆದ ಸಿಪಿಐಎಂ ರಾಜ್ಯ ಸಮ್ಮೇಳನದಲ್ಲಿ 35 ಜನರ ನೂತನ ರಾಜ್ಯ ಸಮಿತಿಯನ್ನು ಆಯ್ಕೆ ಮಾಡಲಾಗಿದೆ. ರಾಜ್ಯದ ನೂತನ ಕಾರ್ಯದರ್ಶಿಯಾಗಿ ಕೆ.ಪ್ರಕಾಶ್ ಸೇರಿ 12 ಜನರ ಕಾರ್ಯದರ್ಶಿ ಮಂಡಳಿ ರಚಿಸಲಾಗಿದೆ. ಕಾರ್ಯದರ್ಶಿ ಮಂಡಳಿ ಸದಸ್ಯರಾಗಿ ಕೆ.ಪ್ರಕಾಶ್, ಯು.ಬಸವರಾಜು, ಜೆ.ಸಿ.ಬಯ್ಯಾರೆಡ್ಡಿ, ಮೀನಾ ಸುಂದರಂ, ಎಸ್.ವರಲಕ್ಷಿ$್ಮ, ಕೆ.ನೀಲಾ, ಎಂ.ಪಿ.ಮುನಿವೆಂಕಟಪ್ಪ, ಗೋಪಾಲಕೃಷ್ಣ ಹರಳಹಳ್ಳಿ, ಸೈಯದ್ ಮುಜೀಬ್, ಯಾದವಶೆಟ್ಟಿ, ಕೆ.ಮಹಂತೇಶ್, ಚಂದ್ರಪ್ಪ ಹೊಸ್ಕೇರಾ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಮಂಡಳಿ ಸದಸ್ಯರ ಜತೆಗೆ ರಾಜ್ಯ ಸಮಿತಿ ಸದಸ್ಯರಾಗಿ ದೇವಿ, ವಿಮಲಾ, ಎಸ್.ವೈ.ಗುರುಶಾಂತ್, ಜಿ.ನಾಗರಾಜು, ಬಿ.ಮಾಳಮ್ಮ, ಟಿ.ಯಶ್ವಂತ್, ಎಚ್.ಎಸ್.ಸುನಂದಾ, ಮುನೀರ್, ಸಿದ್ದಗಂಗಪ್ಪ, ನಿರುಪಾದಿ, ಸೂರ್ಯನಾರಾಯಣ, ಯಮುನಾ ಗಾಂವ್ಕರ್, ಸುರೇಶ್ ಕಲಾಗಾರ್, ಬಿ.ಎನ್.ಮಂಜುನಾಥ್, ಎನ್.ಪ್ರತಾಪಸಿಂಹ, ರುವೀರೆರಡ್ಡಿ, ಕೆ.ಜಿ.ವೀರೇಶ್, ಸೂರಜ್, ಕೃಷ್ಣೇಗೌಡ, ಸತ್ಯಬಾಬು, ಭೀಮರಾಯ, ಎನ್.ಕೆ.ಸುಬ್ರಹ್ಮಣ್ಯ ಅವರನ್ನು ಆಯ್ಕೆ ಮಾಡಲಾಗಿದೆ.