ಪ್ರಜಾಧ್ವನಿ ಯಾತ್ರೆ; ಬೃಹತ್ ಕಾರ್ಯಕರ್ತರ ಸಮಾವೇಶ.

ಪ್ರಜಾಧ್ವನಿ ಯಾತ್ರೆ; ಬೃಹತ್ ಕಾರ್ಯಕರ್ತರ ಸಮಾವೇಶ.
Published on

ಹೊಳೆನರಸೀಪುರ : ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಅಭಿಮಾನಿಗಳು ಜೆಡಿಎಸ್ ಮತ್ತು ಬಿಜೆಪಿಯನ್ನು ಸೋಲಿಸಲು ಕಾಯುತ್ತಿರುವ ಅಸಂಖ್ಯಾತ ಜನರು ಜನವರಿ 21ರಂದು ಹಾಸನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆಯುವ ಪ್ರಜಾ ಧ್ವನಿ ಯಾತ್ರೆಯಲ್ಲಿ ಭಾಗವಹಿಸಿ ಈ ಯಾತ್ರೆಯನ್ನು ಅತ್ಯಂತ ಯಶಸ್ವಿಗೊಳಿಸಬೇಕೆಂದು ವಕೀಲ ಕೆ ಆರ್ ಸುನಿಲ್ ಕುಮಾರ್ ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದವರು ಜನವರಿ 21 ರ ಬೆಳಿಗ್ಗೆ 11 ಗಂಟೆಗೆ ಪ್ರಜಾಧ್ವನಿ ಯಾತ್ರೆಯು ಹಾಸನ ಜಿಲ್ಲೆಗೆ ಆಗಮಿಸಲಿದ್ದು ಹಾಸನ ತಣ್ಣೀರು ಹಳ್ಳದ ದೊಡ್ಡ ಮಂಡಿಗನಹಳ್ಳಿ ಬಳಿಯ ವಸ್ತು ಪ್ರದರ್ಶನ ಆವರಣದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ ಎಂದರು . 

ಕೇಂದ್ರ ಮತ್ತು ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರ ಹಾಗೂ ಜಿಲ್ಲೆಯ ಜೆಡಿಎಸ್ ಪಕ್ಷದ ನಾಯಕರ ಭ್ರಷ್ಟ ಸ್ವಾರ್ಥ ರಾಜಕಾರಣದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸಮಾವೇಶವನ್ನು  ಆಯೋಜನೆ ಮಾಡಿರುವುದಾಗಿ, ಹೇಳಿದರು.

ಪ್ರಜಾ ಧ್ವನಿ ಯಾತ್ರೆಯ ಸಮಾವೇಶದಲ್ಲಿ ಕಾಂಗ್ರೆಸ್ ಮುಖಂಡರಾದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿ.ಕೆ ಹರಿಪ್ರಸಾದ್, ಧ್ರುವ ನಾರಾಯಣ, ಜಿ ಪರಮೇಶ್ವರ್ ಸೇರಿದಂತೆ ಹಲವಾರು ಕಾಂಗ್ರೆಸ್ ನ ಮುಂಚೂಣಿ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ 

 ನಾಳೆ ನಡೆಯುವ ಪ್ರಜಾ ಧ್ವನಿ ಬೃಹತ್ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುತ್ತಿದ್ದು ಹೊಳೆ ನರಸೀಪುರ ತಾಲೂಕಿನಿಂದ 15000 ಕ್ಕೂ ಹೆಚ್ಚು ಕಾರ್ಯಕರ್ತರು ಹೊರಡಲಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷವು ಈಗಾಗಲೇ ಐದು ಜನಪರ ಯೋಜನೆಗಳನ್ನ ಘೋಷಣೆ ಮಾಡಿದ್ದು 200 ಯೂನಿಟ್ ವರೆಗಿನ ಉಚಿತ ವಿದ್ಯುತ್ ಹಾಗೂ ನಾ ನಾಯಕಿ ಕಾರ್ಯಕ್ರಮದಲ್ಲಿ ಪ್ರಿಯಾಂಕ ಗಾಂಧಿಯವರು ಪ್ರತಿ ಮಹಿಳೆಯರಿಗೆ 2,000 ಮಾಸಿಕ ಸಹಾಯಧನ ನೀಡುವುದಾಗಿ ಘೋಷಣೆ ಮಾಡಿದ್ದಾರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಪಿಎಲ್ ಕುಟುಂಬಕ್ಕೆ 10 ಕೆಜಿ ಉಚಿತ ಅಕ್ಕಿಯನ್ನು ವಿತರಣೆ ಯೋಜನೆಯನ್ನು ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ  ಮುಂದುವರೆಸುವುದಾಗಿ, ತಿಳಿಸಿದರು.

ತಾಲೂಕಿನಲ್ಲಿ ಶಾಸಕರ ದುರಾಡಳಿತ ಮಿತಿಮೀರಿದೆ ರಾಜ್ಯ ಸರ್ಕಾರದಿಂದ ಕೋಟಿ ಕೋಟಿ ಅನುದಾನ ಹೊಳೆನರಸೀಪುರಕ್ಕೆ ಬಿಡುಗಡೆಯಾಗಿದೆ ಆದರೆ ಅದೆಲ್ಲ ಕಮಿಷನ್ ರೂಪದಲ್ಲಿ ಯಾರ ಮನೆ ಸೇರಿದೆ ಎಂದು ತಾಲೂಕಿನ ಎಲ್ಲಾ ಜನರಿಗೆ ತಿಳಿದಿದೆ . ತಾಲೂಕಿನಲ್ಲಿ ಗುತ್ತಿಗೆದಾರರಿಲ್ಲದೆ ಶಾಸಕರೇ ಏಜೆಂಟರಾಗಿ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿರುವುದು ದುರಾದೃಷ್ಟಕರ ಸಂಗತಿ. ಎಲ್ಲಾ ಕಾಮಗಾರಿಗಳ ಟೆಂಡರ್ ಗಳನ್ನು ಇವರೇ ಪಡೆದರೆ ಗುತ್ತಿಗೆದಾರರಿಗೆ ಕೆಲಸ ಎಲ್ಲಿದೆ ಎಂದು ಪ್ರಶ್ನಿಸಿದ ಅವರು ಗುತ್ತಿಗೆದಾರರಿಗೆ ಕೆಲಸ ಇಲ್ಲದೆ ಪರಾದಾಡವ ಹೀನಾಯ ಸ್ಥಿತಿ ನಿರ್ಮಾಣವಾಗಿದೆ.ಶಾಸಕರಾದವರು ಗುತ್ತಿಗೆದಾರರ ಸ್ಥಿತಿಗತಿಗಳನ್ನು ಸಹ ಅರ್ಥಮಾಡಿಕೊಳ್ಳಬೇಕಿದೆ ಎಂದರು .ಎಲ್ಲಾ ತಾಲೂಕಿನಲ್ಲಿ ನಡೆಯುವ ಅಕ್ರಮಗಳನ್ನು ಪ್ರಶ್ನಿಸಿದವರ ಮೇಲೆಲ್ಲಾ ಕೇಸ್ ಹಾಕಿಸುತ್ತಿದ್ದಾರೆ.ಇದಕ್ಕೆಲ್ಲ ಅಂತ್ಯವಾಡುವ ಕಾಲ ಸಮೀಪಿಸಿದೆ .ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ನಾನು ಸೇರಿದಂತೆ ಐವರು ಉಸ್ತುಕರಾಗಿ ಅರ್ಜಿ ಸಲ್ಲಿಸಿದ್ದೇವೆ .ಪಕ್ಷ ಯಾರಿಗೆ ಟಿಕೆಟ್ ನೀಡಿದರು ನಾವೆಲ್ಲ ಒಟ್ಟಾಗಿ ಈ ಬಾರಿ ತಾಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ಸೋಲಿಸುತ್ತೇವೆ ಎಂದು ಗುಡುಗಿದರು .ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರೇ ಸ್ಪರ್ಧಿಸಿದರು 60 ರಿಂದ 70 ಸಾವಿರ ವೋಟ್ ಗಳು ಮೀಸಲಿದೆ .ಜೆಡಿಎಸ್ ದುರಾಡಳಿತದಿಂದ ಬೇಸತ್ತ ಕಾರ್ಯಕರ್ತರು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬಹುದು. ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುತ್ತಾರೆ .ಕಾರ್ಯಕರ್ಥರುಸ್ವಾಭಿಮಾನದಿಂದ ಸ್ವತಂತ್ರವಾಗಿ ಬದುಕಲು ಬದಲಾವಣೆ ಬಯಸಿದ್ದಾರೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಕಾಂಗ್ರೆಸ್ ಮುಖಂಡರಾದ ಜಲೇಂದ್ರ ಡೊನಾಲ್ಡ್ ರಂಗಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net