

ಕೋಲಾರ: ಕ್ಲಾಕ್ಟವರ್ನಲ್ಲಿ ರಾಷ್ಟ್ರಧ್ವಜ ಹಾರಿಸುವುದಕ್ಕೆ ಯಾರೂ ಅಡ್ಡಿಮಾಡಲಿಲ್ಲ. ಅದೇ ರೀತಿ ಆ ಮಾರ್ಗದಲ್ಲಿ 100 ಗಣೇಶ ಮೂರ್ತಿಗಳ ಮೆರವಣಿಗೆ ನಡೆಸಿದರೂ ಯಾರ ತಕರಾರೂ ಇರದು. ಆದರೆ ಅನಗತ್ಯವಾಗಿ ಒಂದು ಸಮುದಾಯವನ್ನು ದೂಷಿಸುವುದು, ಪ್ರಚೋದನಕಾರಿ ಹೇಳಿಕೆ ಕೊಡುವುದನ್ನು ಸಂಸದ ಎಸ್.ಮುನಿಸ್ವಾಮಿ ನಿಲ್ಲಿಸಬೇಕು ಎಂದು ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್, ಡಾ.ಎಂ.ಸಿ.ಸುಧಾಕರ್ ಸಲಹೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತೇವೆ ಎಂದರೆ ಯಾರಾದರೂ ತಕರಾರು ಅಥವಾ ವಿರೋಧ ಮಾಡಿದ್ದಾರೆಯೇ? ರಾಷ್ಟ್ರ ಧ್ವಜ ಹಾರಿಸುತ್ತೇನೆ ಎಂದು ಸಂಸದರು ಧರಣಿಗೆ ಮುಂದಾದಾಗ ಮುಸ್ಲಿಂ ಮುಖಂಡರೇ ಜಿಲ್ಲಾಡಳಿತದೊಂದಿಗೆ ಧ್ವಜಾರೋಹಣ ನೆರವೇರಿಸಲಿಲ್ಲವೇ? ಅದೇ ರೀತಿ ಗಣೇಶ ಉತ್ಸವ ಮಾಡುವುದಾದರೆ ಆ ಕ್ಲಾಕ್ಟವರ್ ಭಾಗದ ಮುಸ್ಲಿಂ ಮುಖಂಡರೊಂದಿಗೆ ಚರ್ಚಿಸಿ ಅದ್ದೂರಿಯಾಗಿ ಆಚರಿಸಬಹುದಾಗಿದೆ. ಮುಸ್ಲಿಂರ ಗಂಧೋತ್ಸವ ಬಂದಾಗ ನಗರದ ಇತರ ಕಡೆಗೂ ಕೊಂಡೊಯ್ದು ಸೌಹಾರ್ದತೆ ಮೆರೆಯಬಹುದಾಗಿದೆ. ಅದು ಬಿಟ್ಟು, ಟೀ ಮಾರುವವರು, ಪೆಂಚರ್ ಹಾಕುವವರು ಎಂದು ಟೀಕಿಸುವುದು, ಪ್ರಚೋದನಕಾರಿಯಾಗಿ ಬಹಿರಂಗ ಹೇಳಿಕೆ ಕೊಡುವುದು ಸರಿಯಲ್ಲ ಎಂದರು.
ಮುನಿಸ್ವಾಮಿ ಅವರಿಗೆ ತಿಳಿ ಹೇಳಲು ನಮಗೆ ಹಕ್ಕಿದೆ. ಅನಿವಾರ್ಯ ಕಾರಣಗಳಿಂದ ಮಾಲೂರಿನ ಮಂಜುನಾಥಗೌಡರು ಮತ್ತು ನಾವು ಸೇರಿ ಕಳೆದ ಚುನಾವಣೆಯಲ್ಲಿ ಬೆಂಬಲಿಸಿದ್ದೆವು. ನಾವು ಪಕ್ಷ ನೋಡದೆ, ಮುಸ್ಲಿಮರಿಗೆ ಭರವಸೆ ಕೊಟ್ಟು ಮತಯಾಚಿಸಿದ್ದೆವು. ಇತ್ತೀಚಿನ ದಿನಗಳ ತನಕ ಗೊಂದಲಗಳಿಗೆ ಆಸ್ಪದವಿಲ್ಲದಂತೆ ಮುನಿಸ್ವಾಮಿ ಅಧಿಕಾರ ನಡೆಸುತ್ತಿದ್ದರು. ಆದರೆ ಮುಳಬಾಗಿಲಿನಲ್ಲಿ ಶಿವಾಜಿ ಜಯಂತಿ ಆಚರಣೆ ಮತ್ತು ಕ್ಲಾಕ್ಟವರ್ನಲ್ಲಿ ಧ್ವಜ ಹಾರಿಸುವ ಸಂದರ್ಭ ಮುಸ್ಲಿಮರಿಗೆ ನೋವು ಉಂಟಾಗುವಂತೆ ನಡೆದುಕೊಂಡರು. ಅವರನ್ನು ಯಾರೋ ತಪ್ಪುದಾರಿಗೆ ಎಳೆಯುತ್ತಿದ್ದಂತೆ ಕಾಣುತ್ತಿದೆ. ಇನ್ನು ಮುಂದಾದರೂ ಅವರು ಅಭಿವೃದ್ಧಿ ಕಡೆ ಗಮನ ಹರಿಸಿ ಕ್ಷುಲ್ಲಕ ವಿಚಾರಗಳನ್ನು ಮುನ್ನೆಲೆಗೆ ತರುವುದನ್ನು ಬಿಡಬೇಕು ಎಂದು ತಿಳಿಸಿದರು.
ನನ್ನ ಸಲಹೆ ಸ್ವೀಕರಿಸ್ತಾರೆ: ಸಂಸದ ಮುನಿಸ್ವಾಮಿ ಅವರಿಗೆ ಕೆಲವೊಂದು ಅಭಿವೃದ್ಧಿ ವಿಚಾರಗಳಲ್ಲಿ ಸಲಹೆ ನೀಡುತ್ತಾ ಬಂದಿದ್ದೇನೆ. ಕೆಸಿ ವ್ಯಾಲಿ ನೀರು ತರುವುದು ಸೇರಿ ನಮ್ಮ ಇತಿಮಿತಿಯಲ್ಲಿ ಅವರ ಜತೆ ಶ್ರಮಿಸಿದ್ದೇವೆ. ಸಲಹೆ ನೀಡಿದಾಗ ಆಯ್ತಣ್ಣಾ ಎನ್ನುತ್ತಿದ್ದರು. ಈಗಲೂ ಸ್ವೀಕರಿಸುತ್ತಾರೆ ಎಂಬ ನಂಬಿಕೆ ನಮಗಿದೆ ಎಂದು ಸುಧಾಕರ್ ತಿಳಿಸಿದರು.
ದಾರಿದ್ರ$್ಯ ತೊಳೆಯಲು ಬೆಂಬಲಿಸಿದ್ವಿ: ಹಲವು ಬಾರಿ ಸಂಸದರಾಗಿದ್ದ ವ್ಯಕ್ತಿ ಎಲ್ಲ ಮುಖಂಡರ ಕಥೆ ಮುಗಿಸುತ್ತಿದ್ದರು. ಅಭಿವೃದ್ಧಿ ಮರೀಚಿಕೆಯಾಗಿತ್ತು. ದಾರಿದ್ರ$್ಯ ತೊಳೆದು, ಸಾಮಾನ್ಯ ಪ್ರಜೆಯಂತಿದ್ದ ಮುನಿಸ್ವಾಮಿ ಅವರನ್ನು ಬೆಂಬಲಿಸಿದೆವು. ನಮ್ಮ ಹಣೇಬರಹವೂ ಕೆಟ್ಟಿತ್ತೇನೋ, ಎಲ್ಲರ ಮನವೊಲಿಸಿ ಈ ವ್ಯಕ್ತಿ ಗೆಲ್ಲುವಂತೆ ಮಾಡಿದೆವು. 3 ವರ್ಷದಿಂದ ಇಂತಹ ಪರಿಸ್ಥಿತಿ ಬಂದಿಲ್ಲ. ಈಗ ಬಂದಿದೆ ಎಂದು ಕೊತ್ತೂರು ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.
ಹೈಕಮಾಂಡ್ ಸ್ಪಷ್ಟನೆ ಬಳಿಕ ಕಾಂಗ್ರೆಸ್ಗೆ: ಕಾಂಗ್ರೆಸ್ ಸೇರ್ಪಡೆಗೆ ನಾವಿಬ್ಬರೂ ಯತ್ನಿಸಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧಪಕ್ಷ ನಾಯಕ ಸಿದ್ದರಾಮಯ್ಯ ಜತೆ ಚರ್ಚಿಸಿದ್ದಾಗಿದೆ. ಆದರೆ ಹೈಕಮಾಂಡ್ನಿಂದ ಕೆಲವು ವಿಷಯದ ಕುರಿತು ಸ್ಪಷ್ಟನೆ ಪಡೆದು ನಂತರ ಪಕ್ಷ ಸೇರಲು ತೀಮಾರ್ನಿಸಿದ್ದೇವೆ ಎಂದು ಕೊತ್ತೂರು ಮಂಜುನಾಥ್ ಮತ್ತು ಸುಧಾಕರ್ ಸ್ಪಷ್ಟಪಡಿಸಿದರು.