ಪ್ರಗತಿಯಲ್ಲಿ ಮಾಧ್ಯಮ ರಂಗದ ಪಾತ್ರ ಪ್ರಮುಖ

1BK4
 ಬಸವಕಲ್ಯಾಣ ಸಂಸ್ಥಾನ ಗವಿಮಠದಲ್ಲಿ ಗುರುವಾರ ಸಂಜೆ ನಡೆದ ಸಿದ್ಧಾಂತ ಶಿಖಾಮಣಿ ಹಾಗೂ ಪತ್ರಿಕಾ ದಿನ ಕಾರ್ಯಕ್ರಮದಲ್ಲಿ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಶ್ರೀ ರಾಜೇಶ್ವರ ಶಿವಾಚಾರ್ಯರು, ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಸುನೀಲ ಪಾಟೀಲ್, ಚಂದ್ರಕಾಂತ ಹಾಲಣ್ಣ, ಬಸವಂತಪ್ಪ ಲವಾರೆ, ಎ.ಜಿ.ಪಾಟೀಲ್, ಮಲ್ಲಿಕಾರ್ಜುನ ನಂದಿ ಇತರರಿದ್ದರು.
Published on

ಬಸವಕಲ್ಯಾಣ: ಪ್ರಗತಿಯಲ್ಲಿ ಪತ್ರಿಕಾ ರಂಗ ಹಾಗೂ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಕಷ್ಟದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಿದರೆ ಸುಂದರ ಸಮಾಜ ನಿರ್ಮಾಣಕ್ಕೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಮೇಹಕರ್, ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯರು ನುಡಿದರು.

ನಗರದ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ಗುರುವಾರ ಸಂಜೆ ಗವಿಮಠ ಟ್ರಸ್ಟ್ ಹಾಗೂ ದಸರಾ ದರ್ಬಾರ್ ಸ್ವಾಗತ ಸಮಿತಿ ಸಹಯೋಗದಡಿ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ, ವಚನ ಸಾಹಿತ್ಯ ಉಪನ್ಯಾಸ ಮಾಲೆ, ಪತ್ರಿಕಾ ದಿನ ಮತ್ತು ದಸರಾ ದರ್ಬಾರ್ ಯುವ ಘಟಕ ಉದ್ಘಾಟನೆ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯವನ್ನು ಭಕ್ತರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಿತೋಪದೇಶ ನೀಡಿದರು.

ಧರ್ಮ, ಸಂಸ್ಕೃತಿ, ಪರಿಸರ ಸಂರಕ್ಷಣೆ ಮಾಡಬೇಕಿದೆ. ಸಮಾಜದ ದೊಡ್ಡ ಶಕ್ತಿಯಾಗಿರುವ ಯುವಕರಿಗೆ ಧರ್ಮ ಸಂಸ್ಕಾರದ ಅಗತ್ಯವಿದ್ದು, ಬಸವಕಲ್ಯಾಣದಲ್ಲಿ ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ್ ಸಮಾರಂಭ ಐತಿಹಾಸಿಕವಾಗಿ ನಡೆಯಲಿದ್ದು, ಶ್ರದ್ಧಾ ಭಕ್ತಿಯಿಂದ ಸೇವೆಗೈದು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನೇತೃತ್ವ, ಚಂದ್ರಕಾಂತ ಹಾಲಣ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಸುನೀಲ ಪಾಟೀಲ್, ರಾಮಚಂದ್ರ ಹುಡುಗೆ, ಸೋಮಶೇಖರ ವಸ್ತ್ರದ, ಬಸವಂತಪ್ಪ ಲವಾರೆ, ಎ.ಜಿ. ಪಾಟೀಲ್, ಮಲ್ಲಿಕಾರ್ಜುನ ನಂದಿ, ದಯಾನಂದ ಶೀಲವಂತ, ಸೂರ್ಯಕಾಂತ ಶೀಲವಂತ, ಮಲ್ಲಿಕಾರ್ಜುನ ಅಲಗಡೆ, ಚಂದ್ರಶೇಖರ ಲಾತುರೆ, ರಾಕೇಶ ಪುರವಂತ, ರೇವಣಸಿದ್ದಯ್ಯ ಮಠಪತಿ, ಶ್ರೀಶೈಲ ವಾತಡೆ ಉಪಸ್ಥಿತರಿದ್ದರು.

ರುದ್ರೇಶ್ವರ ಸ್ವಾಮಿ ಸ್ವಾಗತಿಸಿದರು. ರಮೇಶ ರಾಜೋಳೆ ಸಂಚಾಲನೆ ಮಾಡಿದರು. ಈರಣ್ಣ ಶೀಲವಂತ ಪ್ರಾರ್ಥನಗೀತೆ, ಶಕುಂತಲಾ ಮಠ ಮಂಗಲ ಗೀತೆ ಹಾಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜೋಶಿ, ಪ್ರಧಾನ ಕಾರ್ಯದರ್ಶಿ ಉದಯಕುಮಾರ ಮುಳೆ, ಉಪಾಧ್ಯಕ್ಷರಾದ ಡಿ.ಕೆ. ಪ್ರಹ್ಲಾದ, ನಯಿಮೋದ್ದಿನ್ ಚಾಬುಕಸವಾರ್, ಕೋಶಾಧ್ಯಕ್ಷ ಪ್ರದೀಪ ವಿಸಾಜಿ, ಗೌರವ ಸಲಹೆಗಾರ ವೀರಶೆಟ್ಟಿ ಮಲಶೆಟ್ಟಿ, ಪತ್ರಕರ್ತರಾದ ಕಲ್ಯಾಣರಾವ ಮದರಗಾಂವಕರ್, ಧನರಾಜ ರಾಜೋಳೆ, ಮಲ್ಲಿಕಾರ್ಜುನ ಬಂಡೆ, ನಾಗಪ್ಪ ನಿಣ್ಣೆ, ಖಾಜಾ ಸರತಾಜೋದ್ದಿನ್ ಅವರನ್ನು ಸನ್ಮಾನಿಸಲಾಯಿತು. ಡಾ.ಸಾಗರ ತುತಾರೆ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net