ಪ್ರಗತಿಯತ್ತ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ

9npn2
Published on

ನಿಪ್ಪಾಣಿ: ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ನಮ್ಮ ಕಾರ್ಖಾನೆಯು ಫೆಬ್ರವರಿ ೨೦೨೪ರಿಂದ ಎಥೆನಾಲ್ ಉತ್ಪಾದನೆ ಪ್ರಾರಂಭಿಸಿದ್ದು, ಕಾರ್ಖಾನೆಯ ಆರ್ಥಿಕ ಸ್ಥಿತಿ ಸುಧಾರಿಸಿ. ಪ್ರಗತಿಯತ್ತ ಸಾಗುತ್ತಿದೆ ಎಂದು ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲಗೊಂಡಾ ಪಾಟೀಲ ಹೇಳಿದರು.

ಕಾರ್ಖಾನೆಯಲ್ಲಿ ಹಮ್ಮಿಕೊಂಡಿದ್ದ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುಣಮಟ್ಟದ ತಂತ್ರಜ್ಞಾನ ಬಳಸಿ ಪ್ರತಿದಿನ ಸರಾಸರಿ ೧.೫೦ ಲಕ್ಷ ಲೀಟರ್ ಎಥೆನಾಲ್ ಉತ್ಪಾದಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು ೩.೪೭ ಕೋಟಿ ಲೀ. ಎಥೆನಾಲ್ ಉತ್ಪಾದಿಸಲಾಗಿದೆ. ಇದರಲ್ಲಿ ೧೮೯.೫೫ ಕೋಟಿ ರೂ. ಮೌಲ್ಯದ ೩.೦೫ ಕೋಟಿ ಲೀಟರ್ ಎಥೆನಾಲ್ ವಿವಿಧ ತೈಲ ಕಂಪನಿಗಳಿಗೆ ಮಾರಾಟ ಮಾಡಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರದ `ಎಥೆನಾಲ್ ಮಿಶ್ರಣ' ಯೋಜನೆಯಲ್ಲಿ ನಾವೂ ಭಾಗಿಯಾಗಿದ್ದೇವೆ ಎಂದರು.

೨೫.೩೫ ಕೋಟಿ ರೂ. ಮೌಲ್ಯದ ೪೧.೬೫ ಲಕ್ಷ ಲೀಟರ್ ಎಥೆನಾಲ್ ಬಾಕಿ ಉಳಿದಿದೆ. ೫೭೨೮ ಎಂ.ಟಿ. ಮೊಲ್ಯಾಸಿಸ್ ಉಳಿದಿದ್ದು, ಇದರಿಂದ ೧೦.೧೯ ಕೋಟಿ ರೂ. ಮೌಲ್ಯದ ೧೭.೨೯ ಲಕ್ಷ ಲೀಟರ್ ಎಥೆನಾಲ್ ಉತ್ಪಾದಿಸಬಹುದು, ಈ ರೀತಿ ಮೊಲ್ಯಾಸಿಸ್‌ದಿಂದ ೨೨೫ ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ನಮ್ಮ ಎಥೆನಾಲ್‌ವನ್ನು ಐಒಸಿಎಲ್, ಬಿಪಿಸಿಎಲ್, ಎಚ್‌ಪಿಸಿಎಲ್, ಎಂಆರ್‌ಪಿಎಲ್‌ನAತಹ ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದೇವೆ ಎಂದರು.

ಸ್ಥಳೀಯ ರೈತರಿಂದ ಕಬ್ಬು, ಮೆಕ್ಕೆಜೋಳ ಮತ್ತು ಇತರ ಕಚ್ಚಾ ವಸ್ತುಗಳನ್ನು ಬಳಸುವ ಮೂಲಕ ಗ್ರಾಮೀಣ ಆರ್ಥಿಕತೆ ಬಲಪಡಿಸುವ ಮತ್ತು ೧೫೦ ಕೆಎಲ್‌ಪಿಡಿಯಿಂದ ೨೦೦ ಕೆಎಲ್‌ಪಿಡಿ ಸಿರಪ್‌ದಿಂದ ೧೦೦ ಕೆಎಲ್‌ಪಿಡಿ ಧಾನ್ಯದಿಂದ ಎಥೆನಾಲ್ ಉತ್ಪಾದಿಸುವ ಗುರಿ ಹೊಂದಿದ್ದೇವೆ ಎಂದರು.

ಕಾರ್ಖಾನೆ ಉಪಾಧ್ಯಕ್ಷ ಪವನಕುಮಾರ ಪಾಟೀಲ, ಸಂಚಾಲಕ ಅಪ್ಪಾಸಾಹೇಬ ಜೊಲ್ಲೆ, ರಾಮಗೊಂಡಾ ಪಾಟೀಲ, ವಿಶ್ವನಾಥ ಕಮತೆ, ಜಯವಂತ ಭಾಟಲೆ, ಅವಿನಾಶ ಪಾಟೀಲ, ರಾಜೇಂದ್ರ ಗುಂದೇಶಾ, ವಿನಾಯಕ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾವೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net