ಪ್ರಗತಿಯತ್ತ ಮಹಾವೀರ ಸಹಕಾರಿ

9HUKKERI1
ಮಹಾವೀರ ನಿಲಜಗಿ
Published on

ಹುಕ್ಕೇರಿ: ಮಹಾವೀರ ಮಲ್ಟಿ&ಪರ್ಪಸ್​ ಸೌಹಾರ್ದ ಸಹಕಾರಿ ಸಂ ಪ್ರಸಕ್ತ ಆರ್ಥಿಕ ವರ್ಷದಲ್ಲಿ 2.65 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯ ಮಹಾವೀರ ನಿಲಜಗಿ ಹೇಳಿದರು.

ಪಟ್ಟಣದ ಸಹಕಾರಿ ಕಾರ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಪ್ರಧಾನ ಕಚೇರಿ ಸೇರಿ 16 ಶಾಖೆಯಲ್ಲಿ 13431 ಸದಸ್ಯರಿದ್ದಾರೆ. 197 ಕೋಟಿ ರೂ. ಡಿಪಾಜಿಟ್​ ಹೊಂದಿರುವ ಸಂ ವಾರ್ಷಿಕ 851 ಕೋಟಿ ರೂ. ವಹಿವಾಟು ನಡೆಸಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಲ್ಲದೆ ಬೇರೆಡೆಯೂ ಶಾಖೆ ತೆರೆದು ಉದ್ಯೋಗವಕಾಶ ಹೆಚ್ಚಿಸಲಾಗುವುದು. 222 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು, 180 ಕೋಟಿ ರೂ. ಸಾಲ ವಿತರಿಸಿದೆ. ಸದಸ್ಯರಿಗೆ ಶೇ.25 ಲಾಭಾಂಶ ವಿತರಿಸುವ ಸಂಕಲ್ಪ ಮಾಡಲಾಗಿದೆ.
ಡಿಜಿಟಲೀಕರಣದಲ್ಲಿ ಮುಂದಿರುವ ಸಹಕಾರಿ ಮುಂಬರುವ ದಿನಗಳಲ್ಲಿ ಮೊಬೈಲ್​ ಬ್ಯಾಂಕಿಂಗ್​ ಸೇವೆ, ಎಟಿಎಂ ಸೇರಿ ಎಲ್ಲ ಸೌಲಭ್ಯ ನೀಡಲು ತೀರ್ಮಾನಿಸಲಾಗಿದೆ. ಸಹಕಾರಿ ಗ್ರಾಹಕ ಸ್ನೇಹಿಯಾಗಿರಲಿದೆ. ಗ್ರಾಹಕರ, ಸಿಬ್ಬಂದಿ ಪ್ರಾಮಾಣಿಕ ಸೇವೆಯಿಂದ ಸಂ ಪ್ರಗತಿ ಹೊಂದುತ್ತಿದೆ. ಆರ್ಥಿಕ ಚಟುವಟಿಕೆಗಳಿಗಷ್ಟೇ ಸೀಮಿತವಾಗದೆ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಲಾಗುತ್ತಿದೆ ಎಂದರು.

ಉಪಾಧ್ಯ ಕಿರಣ ಸೊಲ್ಲಾಪೂರೆ, ನಿರ್ದೇಶಕರಾದ ರೋಹಿತ ಚೌಗಲಾ, ಬಾಹುಬಲಿ ಸೊಲ್ಲಾಪೂರೆ, ಅಕ್ಕಪ್ಪ ಖತಗಲ್ಲಿ, ಪ್ರಜ್ವಲ ನಿಲಜಗಿ, ಸುಕುಮಾರ ಖತಗಲ್ಲಿ, ಕಾರ್ಯದರ್ಶಿ ಸಂಜಯ ನಿಲಜಗಿ, ಸಿಇಒ ರಾಜೇಂದ್ರ ಪಾಟೀಲ, ಶಾಖಾ ಕಾರ್ಯದರ್ಶಿ ಸಂತೋಷಸಿಂಗ ರಜಪೂತ, ಪ್ರವಿಣ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net