

ಚಿಕ್ಕೋಡಿ: ಜಿಲ್ಲಾ ಕೇಂದ್ರ ಸ್ಥಾನಮಾನ ಹೊಂದಿರುವ ಚಿಕ್ಕೋಡಿ ಮಾರುಕಟ್ಟೆ ಕ್ಷೇತ್ರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಭಾರತದ ಅತ್ಯಂತ ವಿಶ್ವಾಸಾರ್ಹ ಡ್ರೈಕ್ಲೀನಿಂಗ್ ಪರಿಣಿತಿ ಹೊಂದಿರುವ ಫ್ಯಾಬ್ರಿಕ್ ಸ್ಪಾ ಬೆಂಗಳೂರು ಬಳಿಕ ಚಿಕ್ಕೋಡಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದು ಶ್ಲಾಘನೀಯ ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಪಟ್ಟಣದ ಡಾ.ಪ್ರಭಾಕರ ಕೋರೆ ನಗರದಲ್ಲಿ ಮಂಗಳವಾರ ಫ್ಯಾಬ್ರಿಕ್ ಸ್ಪಾ ಸರ‌್ವಿಸಿಸ್ ಉದ್ಘಾಟಿಸಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಮಹಾನಗರಗಳಲ್ಲಿ ಸಿಗುವ ಸೌಲಭ್ಯಗಳನ್ನು ಕಲ್ಪಿಸಲು ಕಂಪನಿಗಳು ತಾಲೂಕು ಮಟ್ಟದಲ್ಲಿ ಶೋರೂಂಗಳನ್ನು ಪ್ರಾರಂಭಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಬಿಜೆಪಿ ಜಿಲ್ಲಾ ಸಂಚಾಲಕ ಮಹಾದೇವ ಯಕ್ಕಂಚಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಮಾಜಿ ಶಾಸಕ ಬಾಳಾಸಾಹೇಬ ವಡ್ಡರ, ಸಂಜಯ ಪಾಟೀಲ, ಸಿದ್ದಪ್ಪ ಡಂಗೇರ ಇತರರಿದ್ದರು.