ಪ್ರಗತಿಯತ್ತ ಇಟಗಿ ಭಾಗ್ಯಲಕ್ಷ್ಮೀ ಮಹಿಳಾ ಸಹಕಾರಿ

web4
ಇಟಗಿ ಗ್ರಾಮದ ಶ್ರೀ ಭಾಗ್ಯಲಕ್ಷ್ಮೀ ಮಹಿಳಾ ವಿವಿಧೋದ್ದೇಶಗಳ ಸಹಕಾರಿ ಸಂಘದ ಮಹಾಸಭೆಯಲ್ಲಿ ಮುಕ್ತಾ ಲದ್ದಿಮಠ, ಗೀತಾ ನೀಲಜಕರ, ಚನ್ನಮ್ಮ ಬಡಿಗೇರ, ರೇಖಾ ಸತ್ಯಪ್ಪಗೋಳ, ನಿರ್ಮಲಾ ಸೋಣಪ್ಪನವರ, ಶೈಲಾ ಕಲಾಲ್ ಇದ್ದಾರೆ.
Published on

ಇಟಗಿ: ಗ್ರಾಮದ ಶ್ರೀ ಭಾಗ್ಯಲಕ್ಷ್ಮೀ ಮಹಿಳಾ ವಿವಿಧೋದ್ದೇಶಗಳ ಸಹಕಾರಿ ಸಂಘಕ್ಕೆ ಪ್ರಸಕ್ತ ಸಾಲಿನಲ್ಲಿ 1.78 ಲಕ್ಷ ರೂ. ಲಾಭವಾಗಿದ್ದು, ಸದಸ್ಯರಿಗೆ ಶೇ. 10 ಲಾಭಾಂಶ ವಿತರಿಸಲಾಗುವುದು ಎಂದು ಅಧ್ಯಕ್ಷೆ ಮುಕ್ತಾ ಲದ್ದಿಮಠ ಹೇಳಿದರು.

ಗ್ರಾಮದ ಸಂಘದ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಹಕಾರಿ ಸಂಘದ 13ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಸಹಕಾರಿ ಸಂಘವು 3,23,66 ರೂ. ದುಡಿಯುವ ಬಂಡವಾಳ ಹೊಂದಿದ್ದು, ಸದಸ್ಯರಿಗೆ ಸ್ವಾವಲಂಬಿ ಜೀವನ ನಡೆಸಲು ಹಾಗೂ ಆರ್ಥಿಕ ಸಬಲರಾಗಲು 2.56 ಕೋಟಿ ರೂ. ವಿವಿಧ ನಮೂನೆಯ ಸಾಲ ನೀಡಿದೆ ಎಂದು ವಿವರಿಸಿದರು.

ಸಂಘದ ಕಾರ್ಯದರ್ಶಿ ಗೀತಾ ನೀಲಜಕರ ಜಮಾ -ಖರ್ಚು ಪತ್ರಿಕೆ ಓದಿದರು. ಚನ್ನಮ್ಮ ಬಡಿಗೇರ, ರೇಖಾ ಸತ್ಯಪ್ಪಗೋಳ, ನಿರ್ಮಲಾ ಸೋಣಪ್ಪನವರ, ಶೈಲಾ ಕಲಾಲ್, ನಭಿಮಾ ನದ್ಾ, ದಿಲ್ಶಾದ್ ನದ್ಾ, ರೇಷ್ಮಾ ನಾಯಕ, ಅಂಜನಾ ಭೋವಿ, ಬಾಳವ್ವ ಗಂಗನಾಯಕ, ತುಕಾರಾಮ ನೀಲಜಕರ, ಬಸವರಾಜ ಕಮ್ಮಾರ, ಲೆಕ್ಕಪತ್ರ ಮೇಲ್ವಿಚಾರಕ ವಿಠ್ಠಲ ನೀಲಜಕರ ಇದ್ದರು. ಅಶ್ವಿನಿ ಯರಗಟ್ಟಿ ಸ್ವಾಗತಿಸಿದರು. ಪ್ರಿಯಾಂಕಾ ಪೂಜಾರ ವಂದಿಸಿದರು. ಮಲ್ಲಿಕಾರ್ಜುನ ಚಿಕ್ಕಮಠ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net