ಪ್ರಗತಿಯ ಗೇಮ್ ಚೇಂಜರ್ ಒಂದು ರಾಷ್ಟ್ರ, ಒಂದು ಚುನಾವಣೆ

oppo_2
oppo_2
Published on

ಕಲಬುರಗಿ (ಪ್ರಕೃತಿ ನಗರ ಸೇಡಂ): ಲೋಕಸಭೆ, ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ಮತ್ತು ೧೦೦ ದಿನಗಳ ಒಳಗಾಗಿ ಸ್ತಳೀಯ ಸಂಸ್ತೆ ಚುನಾವಣೆಗಳನ್ನು ನಡೆಸುವುದು ದೇಶದ ಪ್ರಗತಿಯ ಗೇಮ್ ಚೇಂಜರ್ ಆಗಲಿದೆ. ಪದೇ ಪದೆ ಚುನಾವಣೆಗಳನ್ನು ಎದುರಿಸುವುದು ರಾಜಕಾರಣಿಗಳಿಗೂ ಸಾಕಾಗಿದೆ ಎಂದು ನಿಕಟಪೂರ್ವ ರಾಷ್ಟçಪತಿ ರಾಮನಾಥ ಕೋವಿಂದ್ ಹೇಳಿದರು.

ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಭಾರತ ವಿಕಾಸ ಸಂಗಮ ಹಾಗೂ ವಿಕಾಸ ಅಕಾಡೆಮಿಯಿಂದ ಹಮ್ಮಿಕೊಂಡ ಕೊತ್ತಲ ಸ್ವರ್ಣ, ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿ, ಆರ್ಥಿಕ ತಜ್ಞರು, ಸುಪ್ರೀಂಕೋರ್ಟ್ನ ನಾಲ್ವರು ನಿವೃತ್ತ ನ್ಯಾಯಾಧೀಶರು, ವಿವಿಧ ಕ್ಷೇತ್ರದ ತಜ್ಞರು ಸಕಾರಾತ್ಮಕ ಸಲಹೆಗಳನ್ನು ಪಡೆದಿದ್ದು, ಇದೂ ರಾಷ್ಟçದ ಪ್ರಗತಿಗೆ ಹೊಸ ದಿಕ್ಕು ನೀಡಲಿದೆ ಎಂದು ಹೇಳಿದರು.

ಪದೇ ಪದೆ ಶಿಕ್ಷಕರನ್ನು ಚುನಾವಣೆಗಳಿಗೆ ಬಳಸುತ್ತಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ಹೊಡೆತ ಬೀಳುತ್ತಿದೆ. ಆರ್ಥಿಕತೆ, ಅನಾವಶ್ಯ ಖರ್ಚುವೆಚ್ಚಗಳು ಪ್ರಗತಿಗೆ ಹೊಡೆತ ನೀಡುವ ಚುನಾವಣೆಗಳು ನಡೆಯಬೇಕು. ಈ ನಿಟ್ಟಿನಲ್ಲಿ ಸುದೀರ್ಘ ಚರ್ಚೆ, ಸಂವಾದ, ವಿಚಾರ ವಿನಿಮಯ ಮಾಡಿ ೧೮,೫೨೬ ಪುಟಗಳ ಸುದೀರ್ಘ ವರದಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಪ್ರಕ್ರತಿಯಿಂದ ಸಂಸ್ಕೃತಿ ಕಡೆ ಹೋಗುವ ಉತ್ಸವದ ಘೋಷವಾಕ್ಯವೂ ಇಡೀ ವಿಶ್ವವನ್ನು ಒಳಗೊಂಡಿದೆ. ವೇದ, ಉಪನಿಷತ್ತುಗಳಲ್ಲಿ ವಿಶೇಷವಾಗಿ ಋಗ್ವೇದದಲ್ಲಿ ಮಾನವ ಜೀವನಕ್ಕೆ ಪೂರಕವಾದ ಪಂಚತತ್ವ ಮಾನವ ಜೀವನದ ಆಧಾರವಾಗಿದೆ. ದೇವರೂಪಿ ತತ್ವ ಇದಾಗಿದೆ. ಮರ, ಗಿಡ, ನದಿ, ಸಮುದ್ರ ಎಲ್ಲ ಜೀವಗಳನ್ನು ಪೂಜಿಸುವ ಸಂಸ್ಕಋತಿ ನಮ್ಮದು. ನಮ್ಮ ಎಲ್ಲ ಹಬ್ಬಗಳು ಪ್ರಕೃತಿ ಜತೆಗೆ ಜೋಡಿಸಿಕೊಂಡಿವೆ. ಭಾರತೀಯ ಜ್ಞಆನ ಪರಂಪರೆಗೆ ಬಹು ಆಯಾಮವಿದೆ ಎಂದು ಹೇಳಿದರು.

ಮಹಾಕುಂಭವೂ ಸಂಸ್ಕಋತಿಯ ಶಾಶ್ವತ ರೂಪವಾಗಿದೆ. ಉತ್ಸವವೂ ಸಂಸ್ಕರತಿ ಸಂಗಮವಆಗಿದೆ. ನಿತ್ಯ ಕೋಟಿ, ಎರಡು ಕೋಟಿ, ಮೂರು ಕೋಟಿ ಶ್ರದ್ಧಆಳುಗಳು ಭಆಗವಹಿಸುತ್ತಿದ್ದು, ಇಂದು ಮೌನಿ ಅಮಾವಾಸೆ ನಿಮಿತ್ತ ಕಾಲ್ತುಳಿತವಾಗಿ ಜನರು ಗಾಯಗೊಂಡಿದ್ದು, ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಕುಂಭದಂತ ಸಂಸ್ಕಋತಿಯ ವೈಭವ ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ. ನಮ್ಮ ಪ್ರತಿ ನದಿಯೂ ಪ್ರಕೃತಿಯ ಧ್ಯೋತಕವಾಗಿವೆ. ನಿತ್ಯ ಎಲ್ಲದಕ್ಕೂ ಬಳಸುವ ನೀರಿಗೆ ನಾವು ವಾಪಸ್ ಏನು ನೀಡಬೇಕು ಎಂಬುದು ಅರಿಯಬೇಕು. ಪ್ರಕೃತಿ ವಿರೋಧಿ ಚಟುವಟಿಕೆಗಳಿಂದ ದೂರ ಇರಬೇಕು. ಇಲ್ಲದಿದ್ದರೆ ಕ್ಯಾಲಿಫೋರ್ನಿಯಾದಲ್ಲಿ ಉಂಟಾದAತೆ ಬೆಂಕಿ ಅವಘಡ ಸಂಭವಿಸಲಿದೆ ಎಂದು ಹೇಳಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net