

ಹುಕ್ಕೇರಿ: ತಾಲೂಕಿನ ಬೆಲ್ಲದ ಬಾಗೇವಾಡಿಯ ಅಣ್ಣಾ ಸೌಹಾರ್ದ ಸಹಕಾರಿ ಸಂಘ ಮೂರು ವರ್ಷಗಳಲ್ಲಿ 1.20 ಕೋಟಿ ರೂ. ಲಾಭ ಗಳಿಸುವ ಮೂಲಕ ಸಹಕಾರಿ ಸಂಘಗಳಲ್ಲಿ ಹೆಸರು ಮಾಡಿದೆ ಎಂದು ಉದ್ಯಮಿ ಪೃಥ್ವಿ ಕತ್ತಿ ಹೇಳಿದರು.
ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಣ್ಣಾ ಸೌಹಾರ್ದ ಸಹಕಾರಿ ಸಂಘದ 3ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿ, ಸಹಕಾರಿಯು ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಶಾಖೆ ವಿಸ್ತರಿಸಲಿದೆ. ಲಾಭದ ಜತೆಗೆ ಸದಸ್ಯರ, ಗ್ರಾಹಕರ ವಿಶ್ವಾಸಾರ್ಹತೆಗೆ ಪಾತ್ರವಾಗಿದೆ ಎಂದರು. ಸಂಘದ ಅಧ್ಯಕ್ಷ ಸಂದೀಪ ಕತ್ತಿ ಮಾತನಾಡಿ,
43.14 ಕೋಟಿ ರೂ. ದುಡಿಯುವ ಬಂಡವಾಳದೊಂದಿಗೆ 39.37 ಕೋಟಿ ರೂ. ಠೇವು ಸಂಗ್ರಹಿಸಿದೆ. 14.2 ಕೋಟಿ ರೂ. ಸಾಲ ವಿತರಿಸಿ, 1.20 ಕೋಟಿ ರೂ. ಲಾಭ ಗಳಿಸಿದೆ. ಸದಸ್ಯರಿಗೆ ಶೇ.15 ಲಾಭಾಂಶ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು. ರಾಜಾರಾಮ ಶಿರಾಳಕರ, ಅಶೋಕ ಬೆಲ್ಲದ, ಶ್ರೀಕಾಂತ ಖೆಮಲಾಪುರೆ, ಬಸವರಾಜ ಲಟ್ಟಿ, ಸಿದ್ರಾಮಪ್ಪ ಹೊನ್ನಳ್ಳಿ, ಗಂಗಾಧರ ನಾವಿ, ಮರೆಪ್ಪ ಮುನ್ನೋಳ್ಳಿ, ಅಪ್ಪಾಸಾಹೇಬ ಖೇಮಲಾಪುರೆ ಇತರರು ಇದ್ದರು.