ಪ್ರಗತಿಗೆ ಹೊಸ ದಿಕ್ಕು

TKE manamohan
ತರೀಕೆರೆ ಕಾಂಗ್ರೆಸ್ ಕಚೇರಿಯಲ್ಲಿ ಡಾ. ಮನಮೋಹನ್ ಸಿಂಗ್‌ಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ವಸಂತ್‌ಕುಮಾರ್, ಆರ್.ಕುಮಾರಪ್ಪ, ಟಿ.ದಾದಾಪೀರ್, ಟಿ.ಆರ್.ಶ್ರೀಧರ್, ಟಿ.ಎನ್.ಜಗದೀಶ್, ಟಿ.ಜೆ.ರಾಘವೇಂದ್ರ ಇತರರಿದ್ದರು.
Published on

ತರೀಕೆರೆ: ಮಹತ್ವದ ಸುಧಾರಣೆಗೆ ಸೂತ್ರ ಹೆಣೆದ ಆರ್ಥಿಕ ತಜ್ಞ, ಉತ್ತಮ ಆಡಳಿತಗಾರ ಡಾ. ಮನಮೋಹನ್ ಸಿಂಗ್ ಅವರ ಸಾವು ದೇಶಕ್ಕೆ ಅಪಾರ ನಷ್ಟವನ್ನುಂಟುಮಾಡಿದೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಉಮ್ಮರ್ ಫಾರೂಕ್ ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಮಕ್ಕಳ ಉಚಿತ ಶಿಕ್ಷಣ ಹಕ್ಕು ಕಾಯ್ದೆ, ಮಾಹಿತಿ ಹಕ್ಕು ಅಧಿನಿಯಮಗಳಂಥ ಪ್ರಮುಖ ಕಾರ್ಯಕ್ರಮ ರೂಪಿಸಿ ದೇಶದ ಪ್ರಗತಿಗೆ ಹೊಸ ದಿಕ್ಕು ತೋರಿಸಿದ್ದರು ಎಂದರು. ಅವರ ಆದರ್ಶಮಯ ಬದುಕು ಪ್ರಸ್ತುತ ರಾಜಕಾರಣಕ್ಕೆ ಬರುತ್ತಿರುವವರಿಗೆ ದಾರಿ ದೀಪವಾಗಬೇಕು ಎಂದರು. ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್, ಸದಸ್ಯರಾದ ಆರ್.ಕುಮಾರಪ್ಪ, ಟಿ.ದಾದಾಪೀರ್, ಆದಿಲ್ ಪಾಷಾ, ಮಾಜಿ ಅಧ್ಯಕ್ಷರಾದ ಟಿ.ಎಸ್.ಪ್ರಕಾಶ್ ವರ್ಮ, ಟಿ.ಎಸ್.ಧರ್ಮರಾಜ್, ಮಾಜಿ ಸದಸ್ಯ ಟಿ.ಆರ್.ಶ್ರೀಧರ್, ಪ್ರಮುಖರಾದ ಶಮಿವುಲ್ಲಾ ಷರೀಫ್, ಟಿ.ಎನ್.ಜಗದೀಶ್, ಎಚ್.ಎನ್.ಮಂಜುನಾಥ್, ಎಚ್.ಪರಶುರಾಮ್, ಟಿ.ಜೆ.ರಾಘವೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net