ಪ್ರಗತಿಗೆ ಬೇಕು ಎಲ್ಲರ ಸಾಥ್

15 hbd 01
Published on

ಹುಮನಾಬಾದ್: ಭಾರತ ಸ್ವಾತಂತ್ರದ ಅಮೃತ ಕಾಲದಲ್ಲಿದ್ದು, ರಕ್ಷಣೆ, ಶಿಕ್ಷಣ, ವೈದ್ಯಕೀಯ, ವಿಜ್ಞಾನ, ಮಾಹಿತಿ ತಂತ್ರಜ್ಞಾನ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಗಣನೀಯ ಸಾಧನೆ ಮಾಡುತ್ತಿದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.

ತಹಸಿಲ ಕಚೇರಿಯಲ್ಲಿ ತಾಲೂಕು ಆಡಳಿತ ಮಂಗಳವಾರ ಆಯೋಜಿಸಿದ್ದ ಸ್ವಾತಂತ್ರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸತತ ಹೋರಾಟ, ಶ್ರಮದಿಂದ ದೊರಕಿರುವ ಸ್ವಾತಂತ್ರವನ್ನು ಸ್ಮರಿಸಿ ಉಳಿಸಬೇಕಿದೆ. ಕ್ಷೇತ್ರದ ಅಭಿವೃದ್ಧಿಗೆ ಎಲ್ಲರ ಸಾಥ್ ಅಗತ್ಯವಿದೆ ಎಂದರು.

ಶಿಕ್ಷಕ ವೀರಂತರಡ್ಡಿ ಜಂಪಾ ಉಪನ್ಯಾಸ ನೀಡಿದರು. ಮಾಜಿ ಶಾಸಕ ಸುಭಾಷ ಕಲ್ಲೂರ, ಜಿಪಂ ಮಾಜಿ ಅಧ್ಯಕ್ಷ ಪದ್ಮಾಕರ ಪಾಟೀಲ್, ಪ್ರಮುಖರಾದ ಬಸವರಾಜ ಆರ್ಯ, ವಿಶ್ವನಾಥ ಪಾಟೀಲ್, ಸುಭಾಷ ಆರ್ಯ, ಮಂಜುನಾಥ ಪಂಚಾಳ, ಧರ್ಮಣ್ಣ, ಹಣಮಂತರಾವ ಬಿರಾದಾರ, ತಾಪಂ ಇಒ ದೀಪಿಕಾ ನಾಯ್ಕರ್, ಬಿಇಒ ವೆಂಕಟೇಶ ಗುಡಾಳ ಇತರರಿದ್ದರು. ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ಜಮಖಂಡಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net