ಪ್ರಗತಿಗೆ ಗ್ರಾಹಕರ ವಿಶ್ವಾಸಾರ್ಹತೆ ಮುಖ್ಯ

7
ಹುಲ್ಲೋಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅರಿಹಂತ ಸೌಹಾರ್ದ ಸಹಕಾರಿಯ ವಾರ್ಷಿಕ ಸಭೆಯಲ್ಲಿ ಪವನ ಕತ್ತಿ ಅವರನ್ನು ಸತ್ಕರಿಸಲಾಯಿತು. ಜಯಪಾಲ ಚೌಗಲಾ, ಪಿ.ಆರ್​.ಚೌಗಲಾ, ಬಾಬು ಚೌಗಲಾ, ರವೀಂದ್ರ ಚೌಗಲಾ ಇತರರಿದ್ದರು.
Published on

ಹುಕ್ಕೇರಿ: ಗ್ರಾಮೀಣ ಪ್ರದೇಶದ ಅರಿಹಂತ ಸಹಕಾರಿ ಅಗಾಧವಾಗಿ ಬೆಳೆದು ಜನರ ವಿಶ್ವಾಸಾರ್ಹತೆ ಗಳಿಸಿದೆ ಎಂದು ಬೆಲ್ಲದ ಬಾಗೇವಾಡಿ ಅರ್ಬನ್​ ಬ್ಯಾಂಕ್​ ಅಧ್ಯ ಪವನ ಕತ್ತಿ ಹೇಳಿದರು.

ತಾಲೂಕಿನ ಹುಲ್ಲೋಳಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅರಿಹಂತ ಸೌಹಾರ್ದ ಸಹಕಾರಿಯ 24ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು. ಸಹಕಾರಿಯು ಬಡ ವಿದ್ಯಾರ್ಥಿಗಳಿಗೆ ಶಿಣ ನೀಡಲು ಶಾಲೆ, ಮಹಿಳೆಯರು ಸ್ವಾವಲಂಬಿಗಳಾಗಲು ಹಾಲು ಉತ್ಪಾದಕರ ಸಂ ಸ್ಥಾಪಿಸಿದ್ದು ಶ್ಲಾನೀಯ ಎಂಂದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಅರಿಹಂತ ಸಹಕಾರಿ ಸಂ ಜನರ ಪ್ರೀತಿಗೆ ಪಾತ್ರವಾಗಿದ್ದು, ಇನ್ನೂ ಉನ್ನತಿ ಸಾಧಿಸಲಿ ಎಂದು ಹಾರೈಸಿದರು. ಅಧ್ಯ ಜಯಪಾಲ ಚೌಗಲಾ ಮಾತನಾಡಿ, ಸಹಕಾರಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು ಸದಸ್ಯರಿಗೆ ಶೇ.25 ಲಾಭಾಂಶ ಹಂಚಲು ನಿರ್ಧರಿಸಿದೆ ಎಂದರು.

ಪ್ರಧಾನ ವ್ಯವಸ್ಥಾಪಕ ಆನಂದ ಚೌಗಲಾ ಮಾತನಾಡಿ, ಸಂ 239.29 ಕೋಟಿ ರೂ. ದುಡಿಯುವ ಬಂಡವಾಳ, 217.27 ಕೋಟಿ ರೂ. ಠೇವಣಿ ಸಂಗ್ರಹಿಸಿ, 169.78 ಕೋಟಿ ರೂ. ಸಾಲ ನೀಡಿದೆ. 4.53 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದರು.

ಅತಿಥಿಗಳನ್ನು ಸತ್ಕರಿಸಲಾಯಿತು. ಉಪಾಧ್ಯೆ ಶೃತಿ ಪಾಟೀಲ, ನಿರ್ದೇಶಕರಾದ ಪಿ.ಆರ್​.ಚೌಗಲಾ, ಬಾಬು ಚೌಗಲಾ, ರವೀಂದ್ರ ಚೌಗಲಾ, ಭರಮಪ್ಪ ಚೌಗಲಾ, ಬಸವರಾಜ ಪಾಟೀಲ, ಜಿನ್ನಪ್ಪ ಸಪ್ತಸಾಗರ, ಅಶೋಕ ಚೌಗಲಾ, ಮಾಯಪ್ಪ ಹೊಳೆಪ್ಪಗೋಳ, ಪುಷ್ಪಾ ಚೌಗಲಾ, ರಾಯಣ್ಣ ಭಂಗಿ, ಬಾಳಪ್ಪ ಸಂಕೇಶ್ವರಿ, ರಾಮಪ್ಪ ಗೋಟೂರಿ, ಭೂಪಾಲ ಚೌಗಲಾ, ಬಾಹುಬಲಿ ನಾಗನೂರಿ, ಆಂತರಿಕ ಲೆಕ್ಕಪರಿಶೋಧಕ ಮಹಾವೀರ ಚೌಗಲಾ, ಶಾಖಾ ವ್ಯವಸ್ಥಾಪಕ ಅಜಿತ ಚೌಗಲಾ, ಜೆ.ಎಸ್​.ಚೌಗಲಾ, ಬಿ.ಬಿ.ಚೌಗಲಾ, ಅಜಿತ ಚೌಗಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net