ಪ್ರಗತಿ ಬಡಿಗೇರ್‌ಗೆ ಸನ್ಮಾನ

26Kush01
Published on

ಕುಶಾಲನಗರ: ಕುಶಾಲನಗರದ ನಿವಾಸಿ ಚಂದ್ರಕಲಾ ಬಡಿಗೇರ್ ಮತ್ತು ಬಸವರಾಜ್ ಬಡಿಗೇರ್ ದಂಪತಿಯ ಪುತ್ರಿ ಪ್ರಗತಿ ಬಡಿಗೇರ್ ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಆಕೆ ಓದುತ್ತಿರುವ ಸರ್ಕಾರಿ ಶಾಲೆಯ ಶಿಕ್ಷಕರು ಭಾನುವಾರ ಅವರ ಮನೆಗೆ ತೆರಳಿ ಸನ್ಮಾನಿಸಿದರು.


ಇತ್ತೀಚೆಗೆ ಕೊಪ್ಪಳದಲ್ಲಿ ಗಾಯನ ಸ್ಪರ್ಧೆಯ ಅಂತಿಮ ಸುತ್ತು ನಡೆದು ಪ್ರಗತಿ ವಿಜಯಮಾಲೆ ಧರಿಸಿ ಶನಿವಾರ ತಡರಾತ್ರಿ ಕುಶಾಲನಗರಕ್ಕೆ ಆಗಮಿಸಿದ್ದರು. 21 ಲಕ್ಷ ರೂ. ಮೌಲ್ಯದ ನಿವೇಶನ ಮತ್ತು 4 ಲಕ್ಷ ರೂ. ನಗದು ಬಹುಮಾನ ದೊರೆತಿದೆ ಎಂದು ತಂದೆ ಬಸವರಾಜ್ ಬಡಿಗೇರ್ ಸಂತಸ ಹಂಚಿಕೊಂಡಿದ್ದಾರೆ. ಅಂತಿಮ ಸುತ್ತಿನ ಕಾರ್ಯಕ್ರಮ ವಾಹಿನಿಯಲ್ಲಿ ಇನ್ನೂ ಪ್ರಸಾರವಾಗಿಲ್ಲ.


ಸ್ಪರ್ಧೆಯ ತೀರ್ಪುಗಾರರಾಗಿದ್ದ ಅರ್ಜುನ ಜನ್ಯ ಪ್ರಗತಿಗೆ ಚಿತ್ರವೊಂದಕ್ಕೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಶಿವಲಿಂಗು, ಬಸವರಾಜಪ್ಪ, ಜಮಶಿಡ್ ಅಹಮದ್ ಖಾನ್, ಡಾ.ಸದಾಶಿವ ಪಲ್ಯದ್, ಉ.ರಾ.ನಾಗೇಶ್, ಶಾಂತ ಕುಮಾರ್, ಕುಮಾರ್ ಮತ್ತು ಜನಧ್ವನಿ ವೇದಿಕೆಯ ಸಂಚಾಲಕ ಕೆ.ಎಸ್.ಮಹೇಶ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net